ಬೆಂಗಳೂರು:ಆರನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ನಾಲ್ಕನೇ ಶನಿವಾರವನ್ನು ಸರ್ಕಾರಿ ರಜೆ ಎಂದು ಘೋಷಿಸುವಂತೆ ಸಂಪುಟ ಉಪ ಸಮಿತಿ ಮಾಡಿದ್ದ ಶಿಫಾರಸಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.
ತಿಂಗಳ ನಾಲ್ಕನೇ ಶನಿವಾರ ಸರ್ಕಾರಿ ರಜೆ ಇಲ್ಲ? - ಆರನೇ ರಾಜ್ಯ ವೇತನ ಆಯೋಗ
ಆರನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ನಾಲ್ಕನೇ ಶನಿವಾರವನ್ನು ಸರ್ಕಾರಿ ರಜೆ ಎಂದು ಘೋಷಿಸುವಂತೆ ಸಂಪುಟ ಉಪ ಸಮಿತಿ ಮಾಡಿದ್ದ ಶಿಫಾರಸಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ರಜೆಯ ಬಗ್ಗೆ ಸರ್ಕಾರಿ ನೌಕರರು ಭಾರಿ ನಿರೀಕ್ಷೆ ಇಟ್ಟಿದ್ದರು. ಆದರೆ, ಸಚಿವ ಸಂಪುಟ ಸಭೆ ನಾಲ್ಕನೇ ಶನಿವಾರವನ್ನು ಸರ್ಕಾರಿ ರಜೆ ಎಂದು ಘೋಷಿಸಲು ನಿರಾಕರಿಸಿದೆಯಂತೆ. ಕೆಲ ತಿದ್ದುಪಡಿಗಳೊಂದಿಗೆ ಮುಂದಿನ ಸಂಪುಟ ಸಭೆಯ ಮುಂದಿಡಲು ಸೂಚಿಸಲಾಗಿದೆ.
ಸಂಪುಟ ಉಪ ಸಮಿತಿ ಕೆಲ ನಿಬಂಧನೆಗಳೊಂದಿಗೆ ನಾಲ್ಕನೇ ಶನಿವಾರವನ್ನು ಸರ್ಕಾರಿ ರಜೆ ಎಂದು ಘೋಷಿಸಲು ಶಿಫಾರಸು ಮಾಡಿತ್ತು. ಅದರಂತೆ ನಾಲ್ಕನೇ ಶನಿವಾರವನ್ನು ಸರ್ಕಾರಿ ರಜೆ ಎಂದು ಘೋಷಿಸುವ ಸಲುವಾಗಿ ಪ್ರಸ್ತುತ ಇರುವ ಸಾಂದರ್ಭಿಕ ರಜೆಯನ್ನು 15 ದಿನಗಳಿಂದ 12 ದಿನಗಳಿಗೆ ಇಳಿಸುವುದು. ಮಹಾವೀರ ಜಯಂತಿ, ಬಸವ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಕನಕದಾಸ ಜಯಂತಿಗಳನ್ನು ಮತ್ತು ಕಾರ್ಮಿಕ ದಿನಾಚರಣೆಯ ಸಾರ್ವತ್ರಿಕ ರಜೆಗಳನ್ನು ರದ್ದುಪಡಿಸಿ ಕೆಲಸದ ದಿನವಾಗಿ ಪರಿವರ್ತಿಸುವುದು. ಗುಡ್ ಫ್ರೈಡೆ, ಮಹಾಲಯ ಅಮವಾಸ್ಯೆ, ಈದ್-ಮಿಲಾದ್ ಹಬ್ಬದ ದಿನದ ರಜೆಗಳನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿತ್ತು.