ಬೆಂಗಳೂರು: ರಾಜ್ಯದಲ್ಲಿಂದು 4,991 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 6 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇವತ್ತು 1631 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 34,219 ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 9,59,400 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 10,06,229 ಕ್ಕೆ ಹೆಚ್ಚಾಗಿದೆ. ಮೃತಪಟ್ಟವರ ಸಂಖ್ಯೆ 12,591 ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 269 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿಯೇ 3,509 ಜನಕ್ಕೆ ಸೋಂಕು ತಗುಲಿದ್ದು, 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಮೃತಪಡುತ್ತಿರುವವರ ಸೋಂಕಿನಿಂದ ಪ್ರಮಾಣವೂ 0.12% ಇದ್ದು, ಸೋಂಕಿತರ ಪ್ರಮಾಣ 4.19 % ಗೆ ಏರಿಕೆಯಾಗಿದೆ. ಈವರೆಗೆ 39,85,612 ಮಂದಿ ಲಸಿಕೆ ಪಡೆದಿದ್ದಾರೆ.