ಬೆಂಗಳೂರು:ರಾಜ್ಯದಲ್ಲಿಂದು, 49058 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 328 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿಂದು 49058 ಕೋವಿಡ್ ದೃಢ; 328 ಜನರ ಬಲಿ ತೆಗೆದುಕೊಂಡ ವೈರಸ್ - new COVID19 cases
ರಾಜ್ಯದಲ್ಲಿ ಇಂದೂ ಸಹ ಮಹಾಮಾರಿ ಕೊರೊನಾ ಅಟ್ಟಹಾಸ ಮೆರೆದಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಂದು ಒಟ್ಟು 328 ಜನರ ಬಲಿ ತೆಗೆದುಕೊಂಡಿದೆ. ಇನ್ನು ಸಾಕಷ್ಟು ಕಡೆ ಆಕ್ಸಿಜನ್ ಹಾಗೂ ಬೆಡ್ ಸಮಸ್ಯೆ ಹಾಗೇ ಮುಂದುವರೆದಿದೆ.
49,058 new COVID19 cases, 328 deaths and 18,943 discharges reported in Karnataka
ಇಂದು 18943 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5,17,075 ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 12,55,797 ಮಂದಿ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 17,90,104 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 17,212 ಕ್ಕೆ ಏರಿಕೆಯಾಗಿದೆ.
ಇನ್ನು ಬೆಂಗಳೂರಿನಲ್ಲಿ ಇಂದು 23,706 ಜನರಲ್ಲಿ ಪಾಸಿಟಿವ್ ದೃಢಪಟ್ಟಿದ್ದು, 139 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಮೃತಪಡುತ್ತಿರುವವರ ಪ್ರಮಾಣ 0.66% ಇದ್ದು, ಸೋಂಕಿತರ ಪ್ರಮಾಣ 29.83 % ಕ್ಕೆ ಏರಿಕೆಯಾಗಿದೆ.