ಕರ್ನಾಟಕ

karnataka

ETV Bharat / state

ಬೆಂಗಳೂರು : ಸಕ್ರಿಯ ಪ್ರಕರಣದಲ್ಲಿ ಗಣನೀಯ ಇಳಿಕೆ.. ಇಂದು 4,484 ಮಂದಿ ಗುಣಮುಖ - ಸಕ್ರಿಯ ಪ್ರಕರಣದಲ್ಲಿ ಗಣನೀಯ ಇಳಿಕೆ

ಇಂದು ನಗರದಲ್ಲಿ 481 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 12,15,309ಕ್ಕೆ ಏರಿಕೆಯಾಗಿದ್ದು, 19,411 ಸಕ್ರಿಯ ಪ್ರಕರಣಗಳಿವೆ..

481-new-corona-cases-reported-at-bangalore-today
ಇಂದು 481 ಮಂದಿಗೆ ಕೊರೊನಾ ದೃಢ..ಸಕ್ರಿಯ ಪ್ರಕರಣದಲ್ಲಿ ಗಣನೀಯ ಇಳಿಕೆ

By

Published : Jul 3, 2021, 8:14 PM IST

ಬೆಂಗಳೂರು :ನಗರದಲ್ಲಿ ಕೋವಿಡ್​​​ನಿಂದ ಗುಣಮುಖರಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂದು ಒಟ್ಟು 4,484 ಮಂದಿ ಗುಣಮುಖರಾಗಿದ್ದಾರೆ. ಹಿಂದಿನ ಮೂರು ದಿನಗಳಿಂದ ಸರಿ ಸುಮಾರು 10 ಸಾವಿರ ಸಕ್ರಿಯ ಪ್ರಕರಣಗಳು ಪಾಲಿಕೆ ಅಂಕಿ-ಅಂಶಗಳಲ್ಲಿ ಕಡಿಮೆಯಾಗುತ್ತಿವೆ. ಹೆಚ್ಚಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಬಗ್ಗೆ ಕೆಲ ತಾಂತ್ರಿಕ ಕಾರಣವನ್ನು ಪಾಲಿಕೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 19,411 ಸಕ್ರಿಯ ಪ್ರಕರಣಗಳಿವೆ. ಆದರೆ, ಪಾಲಿಕೆ ಅಧಿಕಾರಿಗಳ ಪ್ರಕಾರ ಸದ್ಯ ಸಕ್ರಿಯ ಪ್ರಕರಣಗಳು ಸುಮಾರು 15 ಸಾವಿರಕ್ಕಿಂತ ಕಡಿಮೆ ಇದ್ದು, ಉಳಿದವರ ಸಂಪರ್ಕ ಹಾಗೂ ಮಾಹಿತಿ ಸಿಗದ ಕಾರಣ ಸಕ್ರಿಯ ಪ್ರಕರಣಗಳಲ್ಲೇ ಉಳಿಸಿಕೊಳ್ಳಲಾಗಿದೆ. ಆದರೆ, ವ್ಯಾಪಕವಾಗಿ ಪೊಲೀಸರು ಹಾಗೂ ಆಸ್ಪತ್ರೆ ಆಡಿಟ್, ಸಹಾಯವಾಣಿ ಮೂಲಕ ಪತ್ತೆ ಹಚ್ಚುತ್ತಿದ್ದು, ಅತಿ ಶೀಘ್ರದಲ್ಲೇ ನಿಖರ ಮಾಹಿತಿ ಕೊಡಲಾಗುವುದು ಎಂದು ಪಾಲಿಕೆ ತಿಳಿಸಿದೆ.

ಹೀಗಾಗಿ, 10 ಸಾವಿರಕ್ಕೂ ಹೆಚ್ಚು ಜನರ ಮಾಹಿತಿ ದಿನವೂ ಕಲೆ ಹಾಕುತ್ತಿದ್ದೇವೆ. ಇಂದು 4,484 ಮಂದಿ ಡಿಶ್ಚಾರ್ಜ್ ಆಗಿದ್ದಾರೆ ಎಂದು ಪಾಲಿಕೆ ತಿಳಿಸಿದೆ. ಇಂದು ನಗರದಲ್ಲಿ 481 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 12,15,309ಕ್ಕೆ ಏರಿಕೆಯಾಗಿದ್ದು, 19,411 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 15,665 ಮಂದಿ ಕೋವಿಡ್​​​ನಿಂದ ಮೃತಪಟ್ಟಿದ್ದಾರೆ.

ಓದಿ:COVID ಬುಲೆಟಿನ್: ರಾಜ್ಯದಲ್ಲಿಂದು 2082 ಮಂದಿಗೆ ಕೊರೊನಾ, 86 ಸೋಂಕಿತರು ಬಲಿ

ABOUT THE AUTHOR

...view details