ಬೆಂಗಳೂರು:ನಗರದಲ್ಲಿ ನಿನ್ನೆ 47 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೊರೊನಾ ಮಹಾಮಾರಿ ಆರಂಭದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 772ಕ್ಕೆ ಏರಿಕೆಯಾಗಿದೆ. ಇದರಲ್ಲಿ ದೆಹಲಿಯಿಂದ ವಾಪಸಾದ ಹನ್ನೊಂದು ತಿಂಗಳ ಮಗುವಿಗೂ ಕೊರೊನಾ ಅಂಟಿಕೊಂಡಿದೆ.
ನಿನ್ನೆ 32 ಮಂದಿ ಕೊರೊನಾ ಮುಕ್ತರಾಗಿದ್ದು, ಈವರೆಗೆ ಒಟ್ಟು 361 ಮಂದಿ ಗುಣಮುಖರಾಗಿದ್ದಾರೆ. 372 ಮಂದಿಗೆ ಚಿಕಿತ್ಸೆ ನಡೆಯುತ್ತಿದೆ. ನಿನ್ನೆಯ ದಿನ ಐವರು ಕೋವಿಡ್ಗೆ ಬಲಿಯಾಗಿದ್ದು, ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ನಲ್ಲಿ ವರದಿ ಮಾಡಿದೆ. ಒಟ್ಟು ಸಾವನ್ನಪ್ಪಿದವರ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ.