ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 453 ಮಂದಿಗೆ ಕೊರೊನಾ ದೃಢ: 7 ಸೋಂಕಿತರು ಬಲಿ‌ - corona news

ಶುಕ್ರವಾರ ರಾಜ್ಯದಲ್ಲಿ 453 ಮಂದಿಗೆ ಸೋಂಕು ತಗುಲಿದ್ದು, 947 ಮಂದಿ ಗುಣಮುಖರಾಗಿದ್ದಾರೆ. 21 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 7 ಜನ ಸೋಂಕಿಗೆ ಬಲಿಯಾಗಿದ್ದಾರೆ.

corona
ಕೊರೊನಾ

By

Published : Feb 26, 2021, 7:57 PM IST

ಬೆಂಗಳೂರು: ರಾಜ್ಯದಲ್ಲಿಂದು 453 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,49,636ಕ್ಕೆ ಏರಿಕೆ ಆಗಿದೆ. 7 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 12,316 ಕ್ಕೆ ಏರಿದೆ.‌ 947 ಮಂದಿ ಗುಣಮುಖರಾಗಿದ್ದು, ಇದುವರೆಗೆ 9,31,725 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ಸಕ್ರಿಯ ಪ್ರಕರಣಗಳು 5576 ಇದ್ದು, 121 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸೋಂಕಿತರ ಪ್ರಕರಣಗಳ ಶೇ. 0.66ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 1.54ರಷ್ಟು ಇದೆ. ಇಂದು ಯುಕೆಯಿಂದ 15 ಪ್ರಯಾಣಿಕರು ಆಗಮಿಸಿದ್ದಾರೆ. ಈವರೆಗೆ 63 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದೆ.‌ 25 ಜನರಿಗೆ ರೂಪಾಂತರ ಕೊರೊನಾ ಹರಡಿದೆ.

ಓದಿ:ಮನುಷ್ಯನ ಅಂತ್ಯ ಸಂಸ್ಕಾರಕ್ಕೂ ಸಿಗುತ್ತಿಲ್ಲ ತುಂಡು ಜಾಗ!

ಬೆಂಗಳೂರಿನಲ್ಲಿಂದು 271 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 4,04,628ಕ್ಕೆ ಏರಿಕೆ ಆಗಿದೆ. 759 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 3,96,274 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 3887 ಸಕ್ರಿಯ ಪ್ರಕರಣಗಳು ಇದ್ದು, 4 ಸೋಂಕಿತರು ಕೊರೊನಾದಿಂದ ಮೃತರಾಗಿದ್ದಾರೆ. ಈವರೆಗೆ 4,466 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ABOUT THE AUTHOR

...view details