ಬೆಂಗಳೂರು: ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ತನ್ನ ಪಾಲಿನ 450 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ರೈಲ್ವೆ ಮಂಡಳಿಯ ಪಿಂಕ್ ಬುಕ್‌ನಲ್ಲಿ ಈ ಮಾಹಿತಿ ದೊರೆತಿದೆ.
ಬೆಂಗಳೂರು ನಗರದ ಬಹುನಿರೀಕ್ಷಿತ ಉಪ ನಗರ ರೈಲು ಯೋಜನೆಯ ಡಿಪಿಆರ್ ಪ್ರಕಾರ ನಿಗದಿಯಾಗಿದ್ದ ತನ್ನ ಪಾಲಿನ (ಶೇ 20 ರಷ್ಟು) ಮೊತ್ತವನ್ನು ಕೇಂದ್ರ ಸರ್ಕಾರ ನೀಡಿದೆ. ರಾಜ್ಯ ಸರ್ಕಾರವೂ ಸಹ ಇಷ್ಟೇ ಮೊತ್ತದ ಹಣ ನೀಡಬೇಕಿದ್ದು, ಉಳಿದ ಹಣವನ್ನು ಸಾಲವಾಗಿ ಪಡೆಯಬೇಕಾಗುತ್ತದೆ.
ಓದಿ:ರಾಷ್ಟ್ರ ರಾಜಧಾನಿಯಲ್ಲಿ ಗುಂಡಿನ ಸದ್ದು: ಯುವಕ ಸಾವು!
ಯಶವಂತಪುರ - ಹೊಸೂರು ನಡುವಿನ ಜೋಡಿ ರೈಲು ಮಾರ್ಗಕ್ಕೆ 225 ಕೋಟಿ, ಕಂಟೋನೆಂಟ್ ರೈಲು ನಿಲ್ದಾಣದಿಂದ ವೈಟ್‌ಫೀಲ್ಡ್ ತನಕದ ನಾಲ್ಕು ಪಥದ ರೈಲು ಮಾರ್ಗಕ್ಕೂ 100 ಕೋಟಿ ಅನುದಾನ ಲಭ್ಯವಾಗಿದೆ.
ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಅನುದಾನ ಲಭ್ಯವಾಗಿರುವುದರಿಂದ ಕಾಮಗಾರಿ ಇನ್ನಷ್ಟು ವೇಗ ಪಡೆಯುವ ಸಾಧ್ಯತೆ ಇದೆ. ನಗರಕ್ಕೆ ಅಗತ್ಯವಿರುವ ಲೆವೆಲ್ ಕ್ರಾಸಿಂಗ್‌ಗಳು, ನಿಲ್ದಾಣಗಳ ಅಭಿವೃದ್ಧಿ, ಯಶವಂತಪುರ ಎರಡನೇ ಟರ್ಮಿನಲ್ ಪ್ರಸ್ತಾವನೆಗೆ ಅನುದಾನ ಲಭ್ಯವಾಗಿದೆ.