ಬೆಂಗಳೂರು: ರಾಜ್ಯದಲ್ಲಿಂದು 442 ಮಂದಿಗೆ ಹೊಸದಾಗಿ ಕೋವಿಡ್ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,79,773 ಕ್ಕೆ ಏರಿಕೆಯಾಗಿದೆ.
ಈ ದಿನ ಸೋಂಕಿಗೆ 7 ಜನರು ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 37,861 ಕ್ಕೆ ತಲುಪಿದೆ. ಕೋವಿಡ್ನಿಂದ ಸುಮಾರು 635 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29,30,264 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನು ರಾಜ್ಯದಲ್ಲಿ 11,619 ಪ್ರಕರಣಗಳು ಸಕ್ರಿಯವಾಗಿವೆ.