ಬೆಂಗಳೂರು: ನಗರದಲ್ಲಿಂದು ಮತ್ತೆ ದಾಖಲೆ ಪ್ರಮಾಣದಲ್ಲಿ ಕೋವಿಡ್ ಹರಡಿದ್ದು, 4,284 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ನಿನ್ನೆಗಿಂತ ಕೋವಿಡ್ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇಂದು 8 ಮಂದಿ ಮೃತಪಟ್ಟಿದ್ದಾರೆ. ನಿನ್ನೆ 18 ಜನ ಮೃತಪಟ್ಟಿದ್ದರು.
ಬೆಂಗಳೂರಿನಲ್ಲಿಂದು 4,284 ಕೋವಿಡ್ ಪಾಸಿಟಿವ್ ಕೇಸ್ ದೃಢ, 8 ಸಾವು - bengaluru latest corona updates
ಬೆಂಗಳೂರಿನಲ್ಲಿ ಇಂದು ಹೊಸದಾಗಿ 4,284 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 8 ಜನ ಸೋಂಕಿತರು ಮೃತಪಟ್ಟಿದ್ದಾರೆ.
![ಬೆಂಗಳೂರಿನಲ್ಲಿಂದು 4,284 ಕೋವಿಡ್ ಪಾಸಿಟಿವ್ ಕೇಸ್ ದೃಢ, 8 ಸಾವು 4284 positive cases found in bengaluru](https://etvbharatimages.akamaized.net/etvbharat/prod-images/768-512-11297271-thumbnail-3x2-surya.jpg)
ಕೋವಿಡ್ ರೋಗಿಗಳಲ್ಲಿ ಈಗಲೂ ಶೇ 80 ಜನರಲ್ಲಿ (ಎಸಿಮ್ಟಮ್ಯಾಟಿಕ್ -ಸೋಂಕು ಲಕ್ಷಣ ಇಲ್ಲದ) ರೋಗ ಲಕ್ಷಣ ಕಂಡು ಬರುತ್ತಿಲ್ಲ. ಆದರೂ ಸೋಂಕು ಲಕ್ಷಣಗಳಿರುವ ರೋಗಿಗಳಿಗೆ ಹಾಸಿಗೆಗಳ ಅಭಾವ ಎದುರಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳ ಜೊತೆ ಬಿಬಿಎಂಪಿ ನಿರಂತರವಾಗಿ ಸಭೆ ನಡೆಸುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯ ಇರುವ ಬೆಡ್ಗಳು ಭರ್ತಿಯಾಗಿದ್ದು, ಕೋವಿಡ್ ಬೆಡ್ಗಳನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರ ಸೂಚಿಸಿದೆ. ನಗರದಲ್ಲಿ ಪ್ರತಿನಿತ್ಯ 60 ಸಾವಿರಕ್ಕೂ ಹೆಚ್ಚು ಕೋವಿಡ್ ಪರೀಕ್ಷೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಜನರಲ್ಲಿ ಪಾಸಿಟಿವ್ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.