ಬೆಂಗಳೂರು:ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಬಂಧ ಇದುವರೆಗೂ 42 ಎಫ್ಐಆರ್ ದಾಖಲಾಗಿದ್ದು, 200ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಗಲಭೆ ಪ್ರಕರಣ: ಬರೋಬ್ಬರಿ 42 ಎಫ್ಐಆರ್... 200ಕ್ಕೂ ಹೆಚ್ಚು ಆರೋಪಿಗಳ ಬಂಧನ - KG Halli DJ Halli
ಬೆಂಗಳೂರು ಗಲಭೆ ಬಗ್ಗೆ ಡಿಸಿಪಿ ಶರಣಪ್ಪ ಪ್ರತಿಕ್ರಿಯಿಸಿದ್ದು, ಈವರೆಗೆ ಬಂಧಿಸಲಾದ ಆರೋಪಿಗಳ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ ತನಿಖೆಯ ಹಂತವನ್ನು ವಿವರಿಸಿದ್ದಾರೆ.
ಗಲಭೆ ಪ್ರಕರಣ: ಬರೋಬ್ಬರಿ 42 ಎಫ್ಐಆರ್...200ಕ್ಕೂ ಹೆಚ್ಚು ಆರೋಪಿಗಳ ಬಂಧನ
ಗಲಭೆ ಪ್ರಕರಣದಲ್ಲಿ ಈವರೆಗೆ ಇನ್ನೂ ಸಾಕಷ್ಟು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಈಗಾಗಲೇ ಆರೋಪಿಗಳ ಬಂಧನಕ್ಕೆ ಕೆಲವು ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನು ಕೆಲವು ತಂಡಗಳು ತನಿಖೆ ಮಾಡುತ್ತಿವೆ. ಡಿಜೆ ಹಳ್ಳಿ, ಕೆಜಿ ಹಳ್ಳಿ, ಟ್ಯಾನರಿ ರಸ್ತೆ ಮತ್ತು ಕಾವಲ್ ಬೈರಸಂದ್ರದಲ್ಲಿ ಪೊಲೀಸರ ಸರ್ಪಗಾವಲು ಹಾಕಿದ್ದೇವೆ.
ಜೊತೆಗೆ ಅರೆಸೇನಾ ಪಡೆಗಳು ಸಹ ಎಲ್ಲೆಡೆ ಗಸ್ತು ತಿರುಗುತ್ತಿವೆ. ಆರೋಪಿಗಳ ಹಿನ್ನೆಲೆ, ಸಂಪರ್ಕಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ ಎಂದಿದ್ದಾರೆ.