ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 415 ಮಂದಿಗೆ ಸೋಂಕು ದೃಢ: ಮೂವರು ಬಲಿ - ಕೊರೊನಾ ಮರಣ ಸುದ್ದಿ

ಬೆಂಗಳೂರಿನಲ್ಲಿಂದು 208 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 4,01,095 ಕ್ಕೆ ಏರಿಕೆ ಆಗಿದೆ. 142 ಸೋಂಕಿತರು ಗುಣಮುಖರಾಗಿದ್ದು 3,92,857 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.

415-new-corona-cases-reported-in-bangalore-3-died
ರಾಜ್ಯದಲ್ಲಿಂದು 415 ಮಂದಿಗೆ ಸೋಂಕು ದೃಢ

By

Published : Feb 10, 2021, 8:55 PM IST

ಬೆಂಗಳೂರು:ರಾಜ್ಯದಲ್ಲಿಂದು 415 ಮಂದಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,43,627ಕ್ಕೆ ಏರಿಕೆ ಆಗಿದೆ. ಮೂವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 12,244ಕ್ಕೆ ಏರಿದೆ.‌ 322 ಮಂದಿ ಗುಣಮುಖರಾಗಿದ್ದು 9,25,489 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.

ಸದ್ಯ ಸಕ್ರಿಯ ಪ್ರಕರಣಗಳು 5,875 ಇದ್ದು 141 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸೋಂಕಿತ ಪ್ರಕರಣಗಳ ಶೇಕಡವಾರು 0.62 ರಷ್ಟು ಇದ್ದರೆ ಮೃತ ಪಟ್ಟವರ ಪ್ರಮಾಣ ಶೇ 0.72 ರಷ್ಟು ಇದೆ.

ಯುಕೆಯಿಂದ ಇಂದು 277 ಪ್ರಯಾಣಿಕರು ಆಗಮಿಸಿದ್ದು, ಪ್ರಯಾಣಿಕರಲ್ಲಿ ಈವರೆಗೆ 59 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದೆ.‌ 21 ಜನರಿಗೆ ರೂಪಾಂತರ ಕೊರೊನಾ ಹರಡಿದೆ.

ಬೆಂಗಳೂರಿನಲ್ಲಿಂದು 208 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4,01,095ಕ್ಕೆ ಏರಿಕೆ ಆಗಿದೆ. 142 ಸೋಂಕಿತರು ಗುಣಮುಖರಾಗಿದ್ದು 3,92,857 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 3,826 ಸಕ್ರಿಯ ಪ್ರಕರಣಗಳು ಇದ್ದು, 3 ಸೋಂಕಿತರು ಕೊರೊನಾದಿಂದ ಮೃತರಾಗಿದ್ದಾರೆ.‌ ಈವರೆಗೆ 4,411 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಇದನ್ನು ಓದಿ:ಸಿಸಿಬಿ ಮಿಂಚಿನ ಕಾರ್ಯಾಚರಣೆ... ನಾಲ್ವರು ಡ್ರಗ್ಸ್​​ ಪೆಡ್ಲರ್​​ಗಳ ಬಂಧನ

ABOUT THE AUTHOR

...view details