ಕರ್ನಾಟಕ

karnataka

ETV Bharat / state

4.15 ಕೋಟಿ ಮೌಲ್ಯದ ರಕ್ತ ಚಂದನ ಮರದ ತುಂಡುಗಳ ಅಕ್ರಮ ಸಾಗಣೆ ಯತ್ನ: 7 ಮಂದಿ ಬಂಧನ - ಮಂಗಳೂರಲ್ಲಿ ರಕ್ತ ಚಂದನ ಮರದ ತುಂಡುಗಳ ಅಕ್ರಮ ಸಾಗಣೆ ಸಂಬಂಧ ಆರೋಪಿಗಳ ಬಂಧನ

ಅಲಾಡಿ ರಾಜೇಶ್ ರೆಡ್ಡಿ, ಅನಿಲ್ ಕುಮಾರ್, ಪಾಲ್‌ರಾಜ್, ದಿನೇಶ್ ಕುಮಾರ್, ಕುಂಜ್ಞ ಮಹಮದ್ ಅನಿಲ್ ಕುಮಾರ್, ಶಮೀರ್.ಎಸ್ ಬಂಧಿತರು. ಆರೋಪಿಗಳು ಈಚರ್ ವಾಹನದಲ್ಲಿ ರಕ್ತ ಚಂದನವನ್ನು ಹುಲ್ಲಿನ ಚೀಲದಲ್ಲಿ ಮುಚ್ಚಿ ಸಾಗಿಸುತ್ತಿದ್ದರು. ಇದಕ್ಕೆ ಮಹೇಂದ್ರ ಮೊರೇಜೋ ವಾಹನ ಬೆಂಗಾವಲಾಗಿದ್ದು, ಖಚಿತ ಮಾಹಿತಿಯ ಅಧಾರದಲ್ಲಿ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

Arrest of accused in Mangalore
Arrest of accused in Mangalore

By

Published : Jun 2, 2022, 9:29 PM IST

ಮಂಗಳೂರು: ಮಂಗಳೂರು ತಾಲೂಕಿನ ಕೆಂಚನಕೆರೆಯಲ್ಲಿ ರಕ್ತ ಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನಗಳನ್ನು ವಶಕ್ಕೆ ತೆಗೆದುಕೊಂಡ ಅರಣ್ಯ ಸಂಚಾರಿ ದಳದ ಅಧಿಕಾರಿಗಳು 7 ಮಂದಿಯನ್ನು ಬಂಧಿಸಿದ್ದಾರೆ.

ಅಲಾಡಿ ರಾಜೇಶ್ ರೆಡ್ಡಿ, ಅನಿಲ್ ಕುಮಾರ್, ಪಾಲ್‌ರಾಜ್, ದಿನೇಶ್ ಕುಮಾರ್, ಕುಂಜ್ಞ ಮಹಮದ್ ಅನಿಲ್ ಕುಮಾರ್, ಶಮೀರ್. ಎಸ್ ಬಂಧಿತರು. ಆರೋಪಿಗಳು ಐಸರ್​​ ವಾಹನದಲ್ಲಿ ರಕ್ತ ಚಂದನವನ್ನು ಹುಲ್ಲಿನ ಚೀಲದಲ್ಲಿ ಮುಚ್ಚಿ ಸಾಗಿಸುತ್ತಿದ್ದರು. ಇದಕ್ಕೆ ಮಹೇಂದ್ರ ಮೊರೇಜೋ ವಾಹನ ಬೆಂಗಾವಲಿಗಿದ್ದು, ಖಚಿತ ಮಾಹಿತಿಯ ಆಧಾರದಲ್ಲಿ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಕ್ತಚಂದನ ಸಾಗಣೆ ಮಾಡುವುದನ್ನು ಪತ್ತೆಹಚ್ಚಿದ್ದಾರೆ. 316 ದಿಮ್ಮಿಗಳು ಸಿಕ್ಕಿದ್ದು ಇದರ ಮೌಲ್ಯ ಸುಮಾರು 4.15 ಕೋಟಿ ಎಂದು ಅಂದಾಜಿಸಲಾಗಿದೆ

ವಾಹನದಲ್ಲಿದ್ದ ರಕ್ತಚಂದನ ಮರದ ತುಂಡುಗಳನ್ನು ಮತ್ತು ಎರಡು ವಾಹನವನ್ನು ವಶಕ್ಕೆ ಪಡೆದುಕೊಂಡು 7 ಮಂದಿಯನ್ನು ಬಂಧಿಸಲಾಗಿದೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಹೆಚ್ಚುತ್ತಿದೆ ಉದ್ದೇಶಿತ ಹತ್ಯೆ: ಶಾ-ದೋವಲ್​ ನಿರಂತರ ಸಭೆ

For All Latest Updates

ABOUT THE AUTHOR

...view details