ಬೆಂಗಳೂರು:ರಾತ್ರೋರಾತ್ರಿ ಶಾಪಿಂಗ್ ಮಾರ್ಟ್ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಾಂಪ್ಲೆಕ್ಸ್ಗೆ ಆವರಿಸಿ ಬರೋಬ್ಬರಿ 4 ಕೋಟಿ ನಷ್ಟವಾಗಿರುವ ಘಟನೆ ತಡರಾತ್ರಿ ನಂಜಪ್ಪ ಸರ್ಕಲ್ ಬಳಿಯ ಶಾಂತಾರಾಮ್ ಕಾಂಪ್ಲೆಕ್ಸ್ನಲ್ಲಿ ಸಂಭವಿಸಿದೆ.
ಮಧ್ಯರಾತ್ರಿ 1.30ರ ಸುಮಾರಿಗೆ ಶಾಂತಾರಾಮ್ ಕಾಂಪ್ಲೆಕ್ಸ್ನ ನೆಲಮಹಡಿಯಲ್ಲಿದ್ದ ಅನ್ವರ್ ಎಂಬುವವರ ಮಾಲೀಕತ್ವದ ಫ್ಯಾಮಿಲಿ ಶಾಪಿಂಗ್ ಮಾರ್ಟ್ನಲ್ಲಿ ಕಾಣಿಸಿಕೊಂಡಿದೆ. ನೋಡು ನೋಡುತ್ತಿದ್ದಂತೆ ಬೆಂಕಿ ಕಾಂಪ್ಲೆಕ್ಸ್ ಪೂರ್ತಿ ಆವರಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದರು.
ಶಾಪಿಂಗ್ ಮಾರ್ಟ್ ಮಾಲೀಕನಿಗೆ ಕೋಟಿ ಕೋಟಿ ನಷ್ಟ ಸ್ಥಳಕ್ಕೆ ಬಂದಿದ್ದ ಏಕೈಕ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯ ಕೆನ್ನಾಲಿಗೆ ಕಂಡು ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಕರೆಯಿಸಿಕೊಂಡಿದ್ದಾರೆ. ಆದರೆ ಉಳಿದ ವಾಹನಗಳು ತಲುಪುವಷ್ಟರಲ್ಲಿ ಇಡೀ ಕಾಂಪ್ಲೆಕ್ಸ್ ಅಗ್ನಿಗಾಹುತಿಯಾಗಿದೆ. ಬರೋಬ್ಬರಿ 9ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಬೆಳಗಿನ ಜಾವದವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.
ಶಾಪಿಂಗ್ ಮಾರ್ಟಿನಲ್ಲಿದ್ದ 4 ಲಕ್ಷ ನಗದು, 3 ಕೋಟಿಯಷ್ಟು ಮೌಲ್ಯದ ವಸ್ತುಗಳು 1 ಕೋಟಿ ಮೌಲ್ಯದ ಪೀಠೋಪಕರಣ ಸಂಪೂರ್ಣ ಸುಟ್ಟು ಭಸ್ಮವಾಗಿವೆ ಎಂದು ಶಾಪಿಂಗ್ ಮಾರ್ಟ್ ಮಾಲೀಕ ಅನ್ವರ್ ತಿಳಿಸಿದ್ದಾರೆ.
ಓದಿ:ಲಖನೌದ ಲೆವಾನ ಹೋಟೆಲ್ನಲ್ಲಿ ಬೆಂಕಿ ಅವಘಡ.. ನಾಲ್ವರ ಸಾವು