ಕರ್ನಾಟಕ

karnataka

ETV Bharat / state

ನರ-ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಬಂತು 3ಡಿ ತಂತ್ರಜ್ಞಾನ: ರೋಗಿ-ವೈದ್ಯರಿಗೆ ಇದುವೇ ವರದಾನ

ಬೆನ್ನುಮೂಳೆ ಸಮಸ್ಯೆ ಚಿಕಿತ್ಸೆಗೆ ಸಹಕಾರಿಯಾಗುವ ಇಂಟ್ರಾಆಪರೇಟಿವ್ 3ಡಿ ತಂತ್ರಜ್ಞಾನವನ್ನ ಬಿಆರ್ ಲೈಫ್, ಎಸ್.ಎಸ್.ಎನ್.ಎಂ.ಸಿ ಆಸ್ಪತ್ರೆ ಹಾಗೂ ಬ್ರೈನ್ಸ್ ನ್ಯೂರೊ ಸ್ಪೈನ್ ಸೆಂಟರ್​ ಪರಿಚಯಿಸಲಾಗುತ್ತಿದೆ.

ನರ-ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಬಂತು 3ಡಿ ತಂತ್ರಜ್ಞಾನ.....ರೋಗಿ-ವೈದ್ಯರಿಗೆ ಇದುವೇ ವರದಾನ

By

Published : Oct 17, 2019, 6:56 PM IST

ಬೆಂಗಳೂರು: ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ಅತ್ಯಂತ ತೀಕ್ಷ್ಣವಾದ ಚಿತ್ರಗಳನ್ನು ಪಡೆಯುವಲ್ಲಿ ವೈದ್ಯರಿಗೆ ಸಹಕಾರಿಯಾಗುವ ಇಂಟ್ರಾಆಪರೇಟಿವ್ 3ಡಿ ತಂತ್ರಜ್ಞಾನವನ್ನು ಬಿಆರ್ ಲೈಫ್, ಎಸ್.ಎಸ್.ಎನ್.ಎಂ.ಸಿ ಆಸ್ಪತ್ರೆ ಹಾಗೂ ಬ್ರೈನ್ಸ್ ನ್ಯೂರೊ ಸ್ಪೈನ್ ಸೆಂಟರ್​ ಪರಿಚಯಿಸಲಾಗುತ್ತಿದೆ.

ನರ-ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಬಂತು 3ಡಿ ತಂತ್ರಜ್ಞಾನ.....ರೋಗಿ-ವೈದ್ಯರಿಗೆ ಇದುವೇ ವರದಾನ

ಆರೋಗ್ಯ ಕ್ಷೇತ್ರದಲ್ಲಿ‌ ಹೊಸ ಹೊಸ ತಂತ್ರಜ್ಞಾನಗಳು ಬರುತ್ತಲೇ ಇರುತ್ತವೆ. ಸದ್ಯ ನರ ಶಸ್ತ್ರಚಿಕಿತ್ಸಕರಿಗೆ ಸಹಾಯ ಮಾಡುವ ಈ ತಂತ್ರಜ್ಞಾನವೂ ಕೇವಲ 60 ಸೆಕೆಂಡ್​ನಲ್ಲಿ 3ಡಿ ಚಿತ್ರವಾಗಿ ಪರಿವರ್ತಿಸಬಹುದಾಗಿದೆ. ರೋಗಿಗಳಿಗೆ ಹಾಗೂ ವೈದ್ಯರಿಗೂ ಈ ತಂತ್ರಜ್ಞಾನ ವರದಾನವಾಗಿದೆ. ಈ ತಂತ್ರಜ್ಞಾನವೂ ಡಿಜಿಟಲ್ ಚಿತ್ರಗಳನ್ನು ಸ್ಪಷ್ಟವಾಗಿ ತೋರಿಸುವುದರಿಂದ ಶಸ್ತ್ರಚಿಕಿತ್ಸೆಯನ್ನ ನಿಖರವಾಗಿ ನಡೆಸಲು ಸಹಕಾರಿಯಾಗಲಿದೆ.

ಈ ಕುರಿತು ಮಾತಾನಾಡಿರುವ ನರ ಶಸ್ತ್ರಚಿಕಿತ್ಸಕ ಡಾ. ವೆಂಕಟರಮಣ, ಪ್ರಸ್ತುತ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಗೆ ಬಳಸುತ್ತಿರುವ ಸಿ-ಆರ್ಮ್ ತಂತ್ರಜ್ಞಾನವು ಇಂಟ್ರಾಆಪರೇಟಿವ್ ಎಕ್ಸ್- ರೇ ಇಮೇಜಿಂಗ್ ತಂತ್ರಜ್ಞಾನವಾಗಿದ್ದು, ಡಿಜಿಟಲ್ ಇಮೇಜ್ ಕೇವಲ 60 ಸೆಕೆಂಡ್​ನಲ್ಲಿ ಸಿಗಲಿದೆ. ಲೋ ರೆಡಿಯೇಷನ್ ಇರುವ ತಂತ್ರಜ್ಞಾನವನ್ನ ಜರ್ಮನ್​ನಿಂದ ತರಿಸಿಕೊಳ್ಳಲಾಗಿದೆ.‌ ಇಂಟ್ರಾಆಪರೇಟಿವ್ 3ಡಿ ತಂತ್ರಜ್ಞಾನಕ್ಕೆ ಸುಮಾರು1.8ಕೋಟಿ ರೂಪಾಯಿ ವೆಚ್ಚ ತಗುಲಿದ್ದು, ಭಾರತದಲ್ಲೇ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನ ಬಳಸಲಾಗುತ್ತಿದೆ. ‌ಈಗಾಗಲೇ 20ಕ್ಕೂ ಹೆಚ್ಚು ಸರ್ಜರಿಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details