ಬೆಂಗಳೂರು:ರಾಜ್ಯದಲ್ಲಿಂದು 388 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,39,775ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 388 ಮಂದಿಗೆ ಸೋಂಕು ದೃಢ: 3 ಸೋಂಕಿತರು ಕೋವಿಡ್ಗೆ ಬಲಿ... - ಕೋವಿಡ್ ಸುದ್ದಿ
ರಾಜ್ಯದಲ್ಲಿಂದು 470 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ಧಾರೆ. ಸದ್ಯ ರಾಜ್ಯದಲ್ಲಿ 5,944 ಸಕ್ರಿಯ ಪ್ರಕರಣಗಳಿವೆ.
ಕೊರೊನಾ
ಮೂವರು ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 12,220 ಕ್ಕೆ ಏರಿದೆ. ಇಂದು 470 ಮಂದಿ ಗುಣಮುಖರಾಗಿದ್ದು 9,21,592 ಮಂದಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 5,944 ಸಕ್ರಿಯ ಪ್ರಕರಣಗಳಿದ್ದು, 145 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತ ಪ್ರಕರಣಗಳ ಶೇಕಡವಾರು 0.72 ರಷ್ಟು ಇದ್ದರೆ, ಮೃತ ಪಟ್ಟವರ ಪ್ರಮಾಣ ಶೇ 0.77 ರಷ್ಟು ಇದೆ. ವಿಮಾನ ನಿಲ್ದಾಣಕ್ಕೆ 4071 ಮಂದಿ ಆಗಮಿಸಿದ್ದು ತಪಾಸಣೆಗೆ ಒಳಪಟ್ಟಿದ್ದು, ಯುಕೆಯಿಂದ 269 ಪ್ರಯಾಣಿಕರು ಆಗಮಿಸಿದ್ದಾರೆ.