ಕ್ರಿಕೆಟ್ ಆಟಗಾರನ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದವನ ಬಂಧನ; 38 ಮೊಬೈಲ್ ಫೋನ್ ವಶಕ್ಕೆ - mobile thief arrested in bengaluru
ಕ್ರಿಕೆಟ್ ಮೈದಾನದಲ್ಲಿ ಆಟವಾಡುತ್ತಿದ್ದ ಆಟಗಾರರ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜಾಲಹಳ್ಳಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
![ಕ್ರಿಕೆಟ್ ಆಟಗಾರನ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದವನ ಬಂಧನ; 38 ಮೊಬೈಲ್ ಫೋನ್ ವಶಕ್ಕೆ 38 mobile seized from mpbile thief](https://etvbharatimages.akamaized.net/etvbharat/prod-images/768-512-11013841-972-11013841-1615796284524.jpg)
38 ಮೊಬೈಲ್ ಫೋನ್ ವಶಕ್ಕೆ
ಬೆಂಗಳೂರು:ನಗರದ ಉತ್ತರ ವಿಭಾಗದ ಜಾಲಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಆಟಗಾರನ ಸೋಗಿನಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ವಿ.ಪಿ. ರಸ್ತೆಯ ಮಹಾವೀರ ಎಂಟರ್ ಪ್ರೈಸಸ್ ಮೊಬೈಲ್ ಅಂಗಡಿಯ ಬಳಿ ಮೊಬೈಲ್ ಮಾರಲು ಬಂದಿದ್ದ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಸವನಗುಡಿ, ಮಲ್ಲೇಶ್ವರಂ, ಜಯನಗರ, ಜಾಲಹಳ್ಳಿ, ಎಚ್ಎಂಟಿ ಗ್ರೌಂಡ್, ಬಾಗಲಗುಂಟೆ ಸೇರಿದಂತೆ ಅನೇಕ ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.