ಕರ್ನಾಟಕ

karnataka

ETV Bharat / state

37 ಇನ್ಸ್​ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ - ಪಿಎಸ್​ಐ ನೇಮಕಾತಿ ಅಕ್ರಮಗಳು

ಈ ಹಿಂದೆ ವರ್ಗಾವಣೆಯಾದರೂ ಠಾಣೆ ಬಿಟ್ಟು ತೆರಳದ ಇನ್ಸ್​ಪೆಕ್ಟರ್​ಗಳಿಗೆ ಏಳು ದಿನದೊಳಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಬೆಳವಣಿಗೆ ನಡುವೆಯೇ ಮತ್ತೆ 37 ಇನ್ಸ್​ಪೆಕ್ಟರ್​ಗಳ ವರ್ಗಾವಣೆಯಾಗಿದೆ.

37 Police Inspectors transferred
37 Police Inspectors transferred

By

Published : May 16, 2022, 6:13 PM IST

ಬೆಂಗಳೂರು: ವರ್ಗಾವಣೆಯಾದರೂ ರಿಪೋರ್ಟ್ ಮಾಡಿಕೊಳ್ಳದ 38 ಇನ್ಸ್​ಪೆಕ್ಟರ್​ಗಳಿಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದರ ಬೆನ್ನಲೇ ಮತ್ತೆ 37 ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.

ಕಳೆದ 15 ದಿನಗಳಿಂದ ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹಲವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ವರ್ಗಾವಣೆಯಾದರೂ ನಿಯುಕ್ತಿಗೊಂಡ ಸ್ಥಾನಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಆದೇಶ ಪಾಲನೆ ಮಾಡದ 38 ಇನ್ಸ್​ಪೆಕ್ಟರ್​ಗಳಿಗೆ ಈ ಬಗ್ಗೆ ಏಳು ದಿನದೊಳಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಬೆಳವಣಿಗೆ ನಡುವೆಯೇ ಮತ್ತೆ 37 ಇನ್ಸ್​ಪೆಕ್ಟರ್​ಗಳ ವರ್ಗಾವಣೆಯಾಗಿದೆ.

ಇನ್ಸ್​ಪೆಕ್ಟರ್​ ಅಂಬರೀಷ್ -ಹೊಸಕೋಟೆ ಬೆಸ್ಕಾಂ, ಶಿವನಗೌಡ -ತೀರ್ಥಹಳ್ಳಿ ಪೊಲೀಸ್ ಠಾಣೆ, ಕೊಟ್ರೇಶ್ -ಕುಮಾರಸ್ವಾಮಿ‌ ಲೇಔಟ್ ಪೊಲೀಸ್ ಠಾಣೆ, ವೆಂಕಟಾಚಲಯ್ಯ -ಜಾಲಹಳ್ಳಿ ಪೊಲೀಸ್ ಠಾಣೆ, ಸತ್ಯನಾರಾಯಣ ಸಿಟಿ -ಕೆಪಿಸಿಟಿ ಎಸ್​​ಬಿ ಬೆಂಗಳೂರು ಸೇರಿ 37 ಜನರನ್ನ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ABOUT THE AUTHOR

...view details