ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 3,691ಮಂದಿಗೆ ಸೋಂಕು ದೃಢ; 44 ಸೋಂಕಿತರು ಕೋವಿಡ್​ಗೆ ಬಲಿ - ರಾಜ್ಯದಲ್ಲಿ 44 ಸೋಂಕಿತರು ಬಲಿ

ರಾಜ್ಯದಲ್ಲಿಂದು 3,691 ಮಂದಿಗೆ ಕೊರೊನಾ‌ ಸೋಂಕು ದೃಢಪಟ್ಟಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 8,09,638ಕ್ಕೆ ಏರಿಕೆ ಆಗಿದೆ.‌ 44 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 10,991ಕ್ಕೆ ಏರಿಕೆ ಆಗಿದೆ.

covid
ಕೋವಿಡ್

By

Published : Oct 27, 2020, 9:53 PM IST

ಬೆಂಗಳೂರು: ರಾಜ್ಯದಲ್ಲಿಂದು 3,691 ಮಂದಿಗೆ ಕೊರೊನಾ‌ ಸೋಂಕು ದೃಢಪಟ್ಟಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 8,09,638ಕ್ಕೆ ಏರಿಕೆ ಆಗಿದೆ.‌ 44 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 10,991ಕ್ಕೆ ಏರಿಕೆ ಆಗಿದೆ.

ಇಂದು 7,740‌ ಸೋಂಕಿತರು ಗುಣಮುಖರಾಗಿದ್ದು ಈವರೆಗೆ 7,27,298 ಡಿಸ್ಜಾರ್ಜ್ ಆಗಿದ್ದಾರೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ.‌ ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳು 71,330 ಇದ್ದು 944 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಕಳೆದ 7 ದಿನಗಳಿಂದ 58,241 ಮಂದಿ ಹೋಂ ಐಸೋಲೇಷನ್ ನಲ್ಲಿ ಇದ್ದಾರೆ. ಸೋಂಕಿತರ ಸಂಪರ್ಕದಲ್ಲಿ ಇದ್ದವರ ಸಂಖ್ಯೆಯು ಇಳಿಕೆಯಾಗಿದೆ. ಪ್ರಾಥಮಿಕವಾಗಿ 3,89,556 ದ್ವಿತೀಯವಾಗಿ 3,66,494 ಜನರು‌ ಸೋಂಕಿತರ ಸಂಪರ್ಕದಲ್ಲಿ ಇದ್ದಾರೆ.

ಬೆಂಗಳೂರಿನಲ್ಲಿ 1,874 ಜನರಿಗೆ ಸೋಂಕು ದೃಢಪಟ್ಟಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 3,29,250ಕ್ಕೆ ಏರಿದೆ. 4,446 ಗುಣಮುಖರಾಗಿದ್ದು, 2,78,843‌ ಜನರು ಡಿಸ್ಜಾರ್ಜ್ ಆಗಿದ್ದಾರೆ. ಹಾಗೇ ಕೊರೊನಾಗೆ 24 ಮಂದಿ ಮೃತರಾಗಿದ್ದು ಸಾವಿನ ಸಂಖ್ಯೆ 3,778ಕ್ಕೆ ಏರಿದೆ. ಸದ್ಯ ಬೆಂಗಳೂರಿನಲ್ಲಿ 46,628 ಸಕ್ರಿಯ ಪ್ರಕರಣಗಳು ಇವೆ.

ಫೇಸ್ ಮಾಸ್ಕ್ ಧರಿಸುವ ಕುರಿತು‌ ಪಾಲಿಕೆ ಸ್ಪಷ್ಟನೆ
ಫೇಸ್ ಮಾಸ್ಕ್ ಕುರಿತು ವಾಹನ ಸವಾರರಲ್ಲಿ ಸಾಕಷ್ಟು ಗೊಂದಲ‌ಇತ್ತು. ನಿತ್ಯ ಮಾರ್ಷಲ್​ ಹಾಗೂ ಜನರ ನಡುವೆ ವಾಗ್ವಾದಗಳೇ ನಡೆಯುತ್ತಿದ್ದವು. ಕಾರ್​ನಲ್ಲಿ ಹೋಗುವಾಗಲೂ ಮಾಸ್ಕ್ ಧರಿಸಬೇಕಾ ಎಂಬ ಪ್ರಶ್ನೆಗಳು ಮೂಡಿದ್ದವು. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ್ ಪ್ರಸಾದ್ ಮಾಸ್ಕ್ ಧರಿಸುವ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಕಾರ್​ ಓಡಿಸುವಾಗ ಮಾಸ್ಕ್ ಕಡ್ಡಾಯ ಧರಿಸುವುದು ಹಾಗೂ ಕಾರಿನಲ್ಲಿ ಯಾವುದೇ ಸಹ ಪ್ರಯಾಣಿಕರಿಲ್ಲದೇ ಇರುವಾಗ ಕಾರ್​ನ ಕಿಟಕಿ ಗ್ಲಾಸ್ ಇಳಿಸಿದ್ದರೆ, ಸಿಗ್ನಲ್ ಬಳಿ ಕಾರನ್ನು ನಿಲ್ಲಿಸಿದರೆ ಮಾಸ್ಕ್ ಧರಿಸುವುದು ಕಡ್ಡಾಯ. ಇನ್ನು ತಿನ್ನುವಾಗ ಕುಡಿಯುವಾಗ ಹಾಗೂ ಸ್ವಿಮಿಂಗ್ ಪೂಲ್​ನಲ್ಲಿ ಇರುವಾಗ ಮಾತ್ರ ಮಾಸ್ಕ್​ಗೆ ವಿನಾಯಿತಿ ನೀಡಲಾಗಿದೆ. ನಾಲ್ಕು ಜನ ಇದ್ದಾಗ ಅಥವಾ ಒಂದೆಡೆ ಸೇರಿ ಮಾತನಾಡುವಾಗಲೂ ಮಾಸ್ಕ್ ಧರಿಸಬೇಕು.‌ ಮಾಸ್ಕ್ ಧರಿಸುವ ಕುರಿತು ವಲಯವಾರು ಜಾಗೃತಿ ಮಾಡಿಸುವಂತೆ, ಸಮಿತಿ ರಚಿಸಲು ಆದೇಶಿಸಲಾಗಿದೆ. ವಾಹನ ಓಡಿಸುವಾಗ ಒಬ್ಬರೇ ಇದ್ದೇವೆ ಎಂದು ಮಾಸ್ಕ್ ಧರಿಸದೇ ಇದ್ದರೆ ದಂಡ ವಿಧಿಸಲಾಗುತ್ತೆ.

ಹಬ್ಬದ ಸಂದರ್ಭದಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿರುವ ಜನ

ದೇಶದಾದ್ಯಂತ ಹಬ್ಬದ ಸಂದರ್ಭದಲ್ಲಿ ಕೋವಿಡ್ ಹರಡುವಿಕೆಯ ನಿಯಮಗಳನ್ನು ಜನರು ಗಾಳಿಗೆ ತೂರಿದ್ದಾರೆ. ಕೊರೊನಾ ಸಂಪೂರ್ಣವಾಗಿ ಹೋಗಿಲ್ಲ, ಜನರು ನಿಯಮ‌ ಪಾಲನೆ ಮಾಡುವುದು ಈಗಲೂ ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಕಂಟೋನ್ಮೆಂಟ್ ಜೋನ್​ನಲ್ಲಿ ಲಾಕ್​ಡೌನ್ ಮುಂದುವರೆಸುವಂತೆ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ.‌ ವಿಪತ್ತು ನಿರ್ವಹಣಾ ಕಾಯ್ದೆ 10(2) (1) ಅಡಿಯಲ್ಲಿ ಈ ನಿಯಮ ಜಾರಿ ಮಾಡಲಾಗಿದೆ. ಎಲ್ಲೆಡೆ ಕ್ರಮೇಣ ಸಡಿಲವಾಗಿದ್ದ ನಿಯಮಗಳು, ಈಗ ಕಂಟೋನ್ಮೆಂಟ್ ಜೋನ್​ಗಳಲ್ಲಿ ಕಟ್ಟುನಿಟ್ಟಾಗಿ ಲಾಕ್​ಡೌನ್ ಮುಂದುವರೆಸುವಂತೆ ಆದೇಶಿಸಲಾಗಿದೆ.

ABOUT THE AUTHOR

...view details