ಕರ್ನಾಟಕ

karnataka

35ನೇ ಆಕ್ಸಿಜನ್ ಎಕ್ಸ್‌ಪ್ರೆಸ್​ನಲ್ಲಿ ರಾಜ್ಯಕ್ಕೆ ಬಂತು 98.09 ಟನ್ ಪ್ರಾಣವಾಯು

By

Published : Jun 15, 2021, 12:13 PM IST

35ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಇಂದು ಬೆಂಗಳೂರು ತಲುಪಿದ್ದು, 6 ಕ್ರಯೋಜೆನಿಕ್ ಕಂಟೇನರ್‌ಗಳ ಮೂಲಕ 98.09 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹೊತ್ತು ತಂದಿದೆ.

35rd oxygen express train with 98 tone oxygen arrives Bangalore
ಆಕ್ಸಿಜನ್ ಎಕ್ಸ್‌ಪ್ರೆಸ್

ಬೆಂಗಳೂರು: 35ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಇಂದು ಬೆಳಗ್ಗೆ 9:00ಕ್ಕೆ ಬೆಂಗಳೂರಿನ ವೈಟ್‌ ಫೀಲ್ಡ್ ಕಂಟೇನರ್ ಡಿಪೋ ತಲುಪಿದೆ. ಈ ರೈಲು ಜೂ. 13ರಂದು ಮಧ್ಯಾಹ್ನ 05:09ಕ್ಕೆ ಗುಜರಾತ್‌ನ ಕಾನಾಲಸ್‌ನಿಂದ ಲೋಡ್ ಮಾಡಿಕೊಂಡು ಪ್ರಯಾಣ ಬೆಳೆಸಿತ್ತು.

ಆಕ್ಸಿಜನ್ ಎಕ್ಸ್‌ಪ್ರೆಸ್

ಈ ರೈಲು 6 ಕ್ರಯೋಜೆನಿಕ್ ಕಂಟೇನರ್‌ಗಳ ಮೂಲಕ 98.09 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಾಗಿಸಿದೆ. ಇಲ್ಲಿಯವರೆಗೆ ಕರ್ನಾಟಕವು 3,959.51 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ರೈಲು ಮೂಲಕ ಸ್ವೀಕರಿಸಿದೆ.

ಭಾರತೀಯ ರೈಲ್ವೆ ಇದುವರೆಗೆ 424 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ಓಡಿಸಿದೆ ಮತ್ತು 1,748 ಟ್ಯಾಂಕರ್‌ಗಳಲ್ಲಿ 30,455 ಟನ್‌ಗಳಷ್ಟು ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ಸಾಗಿಸಿದೆ. ಜೊತೆಗೆ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ 15 ರಾಜ್ಯಗಳಿಗೆ ನೆರವಾಗಿದೆ.

ABOUT THE AUTHOR

...view details