ಬೆಂಗಳೂರು:ಕಳೆದ ಎರಡು ದಿನಗಳಲ್ಲಿ ಮೂರು ಸಾವಿರ ಕೋವಿಡ್ ಪ್ರಕರಣ ಕಂಡು ಬಂದು ಬೆಚ್ಚಿಬೆದ್ದಿದ್ದ ನಗರಕ್ಕೆ ಇಂದು ಮತ್ತೊಂದು ಆಘಾತ ಕಾದಿದೆ. ನಗರದಲ್ಲಿ ಬರೋಬ್ಬರಿ 3515 ಪ್ರಕರಣಗಳು ದೃಢಪಟ್ಟಿವೆ.
ಬೆಂಗಳೂರಲ್ಲಿ ಕೊರೊನಾ ಅಬ್ಬರ: ಇಂದು 3,515 ಪಾಸಿಟಿವ್ ಕೇಸ್ ಪತ್ತೆ - ಬೆಂಗಳೂರು ಸುದ್ದಿ
ಬೆಂಗಳೂರಿನಲ್ಲಿ ಬರೋಬ್ಬರಿ 3,515 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿದೆ.

ಬೆಂಗಳೂರಿನಲ್ಲಿ ಕೊರೊನಾ
ಕೋವಿಡ್ ಎರಡನೇ ಅಲೆ ಆರಂಭವಾದ ಬಳಿಕ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಇದಾಗಿದೆ. ನಿತ್ಯ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕ ಮನೆಮಾಡಿದೆ.
ಈಗಾಗಲೇ ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳು ಹಾಗೂ ಅರವತ್ತು ವರ್ಷ ಮೇಲ್ಪಟ್ಟವರು ಅನಗತ್ಯವಾಗಿ ಹೊರಗೆ ಓಡಾಡದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ಸಭೆ ಸಮಾರಂಭಗಳು, ಗುಂಪುಗೂಡದಂತೆಯೂ ಮನವಿ ಮಾಡಲಾಗಿದೆ.