ಕರ್ನಾಟಕ

karnataka

ETV Bharat / state

3,455 ಕೋಟಿ ಮೊತ್ತದ 59 ಯೋಜನೆಗಳಿಗೆ ಅನುಮೋದನೆ: 18 ಸಾವಿರ ಉದ್ಯೋಗ ಸೃಷ್ಟಿ - 46 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ

ರಾಜ್ಯದಲ್ಲಿ 59 ಯೋಜನೆಗಳಿಗೆ ಅನುಮೋದನೆ - 3,455.39 ಕೋಟಿ ರೂ. ಬಂಡವಾಳ ಹೂಡಿಕೆ- 18 ಸಾವಿರ ಉದ್ಯೋಗ ಸೃಷ್ಟಿ - ಸಚಿವ ಮುರುಗೇಶ್ ನಿರಾಣಿ

3,455 ಕೋಟಿ ಮೊತ್ತದ 59 ಯೋಜನೆಗಳಿಗೆ ಅನುಮೋದನೆ: 18 ಸಾವಿರ ಉದ್ಯೋಗ ಸೃಷ್ಟಿ
3455 crore approved for 59 projects: 18 thousand job creation

By

Published : Jan 25, 2023, 7:36 PM IST

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಜನೆಗೆ ಮತ್ತಷ್ಟು ಗಮನಹರಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 59 ಯೋಜನೆಗಳ 3,455.39 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ. ನಗರದ ಉದ್ಯೋಗ ಮಿತ್ರ ಕಚೇರಿಯಲ್ಲಿ ಇಂದು ಸಂಜೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ 137ನೇ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ನಿರಾಣಿ, ಒಟ್ಟು 59 ಯೋಜನೆಗಳಿಂದ 3,455.39 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 18,567 ಜನರಿಗೆ ಉದ್ಯೋಗವಕಾಶಗಳು ಲಭಿಸಲಿವೆ ಎಂದು ತಿಳಿಸಿದ್ದಾರೆ. ಪ್ರಸ್ತಾವನೆಗಳಲ್ಲಿ 50 ಕೋಟಿ ರೂ. ಅಧಿಕ ಬಂಡವಾಳ ಹೂಡಿಕೆಯ 11 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 2186.70 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 10,559 ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದ್ದಾರೆ.

15 ಕೋಟಿ ರೂಪಾಯಿಗಳಿಂದ 50 ಕೋಟಿ ರೂಪಾಯಿ ಒಳಗಿನ ಬಂಡವಾಳ ಹೂಡಿಕೆಯ 46 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಿದೆ. ಒಟ್ಟು 1049.19 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 8,008 ಜನರಿಗೆ ಉದ್ಯೋಗ ಸೃಜನೆಯಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ಎರಡು ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅನುಮೋದಿಸಿದ್ದು, 219.50 ಕೋಟಿ ರೂ. ಹೂಡಿಕೆಯಾಗಲಿದೆ ಎಂದು ತಿಳಿಸಿದ್ದಾರೆ.

ಅನುಮೋದನೆ ನೀಡಿರುವ ಪ್ರಸ್ತಾವನೆಗಳು:
* ಮೈಸೂರ್ ಸ್ಟೀಲ್ಸ್ ಲಿಮಿಟೆಡ್- ಸ್ಥಳ: ಮೇಟಗಾನಹಳ್ಳಿ, ಮೈಸೂರು. ಹೂಡಿಕೆ 405.43 ಕೋಟಿ ರೂ. ಉದ್ಯೋಗ 200
* ಎನ್.ಐ.ಡಿ.ಸಿ ಇಂಡಸ್ಟ್ರೀಯಲ್ ಆಟೋಮೋಷನ್ ಇಂಡಿಯಾ ಲಿಮಿಟೆಡ್- ಸ್ಥಳ: ಕೋಟೂರ್, ಬೇಲೂರು ಇಎಂಸಿ ಕೈಗಾರಿಕಾ ಪ್ರದೇಶ. ಹೂಡಿಕೆ 350 ಕೋಟಿ ರೂ., ಉದ್ಯೋಗ 730
* ಸಿಲಾನ್ ಬಿವೆರೇಜ್ ಲಿಮಿಟೆಡ್- ಸ್ಥಳ: ಎಫ್ ಎಮ್ ಸಿ ಜಿ ಕ್ಲಸ್ಟರ್ ಧಾರವಾಡ. ಹೂಡಿಕೆ 256.3 ಕೋಟಿ ರೂ., ಉದ್ಯೋಗ 200.
* ಬಾಲಾಜಿ ವೇರರ್ಸ್ ಪ್ರೈ ಲಿಮಿಟೆಡ್- ಸ್ಥಳ: ಕಣಗಲಾ ಕೈಗಾರಿಕಾ ಪ್ರದೇಶ ಬೆಳಗಾವಿ ಜಿಲ್ಲೆ. ಹೂಡಿಕೆ 251.25 ಕೋಟಿ ರೂ., ಉದ್ಯೋಗ 500
* ಮಂಜುಶ್ರೀ ಟೆಕ್ನೋಪಾರ್ಕ್ ಲಿಮಿಟೆಡ್- ಸ್ಥಳ: ಬಡಗುಪ್ಪೆ, ಕೆಲ್ಲಂಬಳ್ಳಿ, ಕೈಗಾರಿಕಾ ಪ್ರದೇಶ ಚಾಮರಾಜನಗರ. ಹೂಡಿಕೆ 253 ಕೋಟಿ ರೂ., ಉದ್ಯೋಗ 500
* ಕ್ಸಿಸೋಡ ಇಂಡಿಯಾ ಪ್ರೈ ಲಿಮಿಟೆಡ್- ಸ್ಥಳ: ಶಿರಾ ಕೈಗಾರಿಕಾ ಪ್ರದೇಶ ತುಮಕೂರು. ಹೂಡಿಕೆ 138 ಕೋಟಿ ರೂ., ಉದ್ಯೋಗ 160
* ಮಹಾಮಾನವ್ ಇನ್‍ಸ್ಪಾಟ್ ಪ್ರೈ ಲಿಮಿಟೆಡ್- ಸ್ಥಳ: ಬೆಳಗಲ್ ಗ್ರಾಮ, ಬಳ್ಳಾರಿ. ಹೂಡಿಕೆ 90 ಕೋಟಿ ರೂ., ಉದ್ಯೋಗ 90
* ಎ.ಸಿ.ಆರ್ ಪ್ರಾಜೆಕ್ಟ್- ಸ್ಥಳ: ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ. ಹೂಡಿಕೆ 85 ಕೋಟಿ ರೂ., ಉದ್ಯೋಗ 350
* ನಿಯೋಬಿ ಸಲ್ಯೂಷನ್ ಪ್ರೈ ಲಿಮಿಟೆಡ್- ಸ್ಥಳ: ಎಎಲ್‍ಜಿಸಿ ಕ್ಲಸ್ಟರ್, ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶ, ಧಾರವಾಡ. ಹೂಡಿಕೆ 50 ಕೋಟಿ ರೂ., ಉದ್ಯೋಗ 563
* ಅಭಯ್ ಆಗ್ರೋ ಫುಡ್ ಪ್ರೈ ಲಿಮಿಟೆಡ್- ಸ್ಥಳ:- ಗಬಾರ ಗ್ರಾಮ, ಕೊಪ್ಪಳ ಜಿಲ್ಲೆ. ಹೂಡಿಕೆ 32.65 ಕೋಟಿ ರೂ., ಉದ್ಯೋಗ -35

ಇದನ್ನೂ ಓದಿ: ಡಿಕೆಶಿ ನನ್ನ ಜೀವನ ಹಾಳು ಮಾಡಿದ್ದಾನೆ: ಸಿಡಿ ಪ್ರಕರಣ ಸಿಬಿಐಗೆ ನೀಡುವಂತೆ ಮನವಿ ಮಾಡ್ತೇನಿ: ರಮೇಶ್​ ಜಾರಕಿಹೊಳಿ

ABOUT THE AUTHOR

...view details