ದೇವನಹಳ್ಳಿ(ಬೆಂಗಳೂರು ಗ್ರಾ.): ಕರ್ನಾಟಕ ವಿಧಾನಸಭಾ ಚುನಾವಣೆ-2023 ಏ.13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಕೊನೆಯ ದಿನವಾದ ಗುರುವಾರ(ಏ.20) ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 33 ಅಭ್ಯರ್ಥಿಗಳಿಂದ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ಮಾಹಿತಿ ನೀಡಿದರು.
ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಎಎಪಿ ಪಕ್ಷದ ಅಭ್ಯರ್ಥಿಯಾಗಿ ಪ್ರಶಾಂತ್ ಸುಬ್ರಮಣಿ, ಬಿ.ಎಸ್.ಪಿ ಪಕ್ಷದಿಂದ ಡಿ.ಎಂ ಲಕ್ಷ್ಮಿನಾರಾಯಣ, ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ನಾರಾಯಣಸ್ವಾಮಿ, ಅನುಷ.ಪಿ ಆರ್, ಈರೇಗೌಡ, ಅಂಬುಜ, ನವೀನ್ ಕುಮಾರ್.ಎಸ್.ಆರ್, ಜಿ.ಅಶೋಕ್, ಸುರೇಶ್.ಕೆ, ಟಿ.ನಾಗರಾಜು ಹಾಗೂ ಇತರೆ ಪಕ್ಷಗಳಿಂದ ಬಿ. ಸೊಣ್ಣಪ್ಪ, ಶರತ್ ಬಚ್ಚೇಗೌಡ, ರಮೇಶ ನಾಮಪತ್ರ ಸಲ್ಲಿಸಿದ್ದಾರೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 07 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ನಿಂದ ನಾರಾಯಣ ಸ್ವಾಮಿ ಎಲ್.ಎನ್, ಪಕ್ಷೇತರ ಅಭ್ಯರ್ಥಿಗಳಾಗಿ ನಾರಾಯಣಸ್ವಾಮಿ, ವಿ.ಮಂಜುನಾಥ್, ಕೆ.ಮುನಿಯಪ್ಪ, ನಿಸರ್ಗ.ವಿ, ಶಿವಪ್ಪ ಹಾಗೂ ಇತರೆ ಪಕ್ಷದಿಂದ ಡಾ. ಎಂ.ವೆಂಕಟಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 08 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿ.ಎಸ್.ಪಿ ಪಕ್ಷದಿಂದ ಬಿ.ಎಲ್.ಪಿಳ್ಳಪ್ಪ, ಜೆಡಿಎಸ್ನಿಂದ ಬಿ.ಮುನೇಗೌಡ, ಬಿಜೆಪಿಯಿಂದ ಧೀರಜ್ ಮುನಿರಾಜ್, ಐಎನ್ಸಿ ಪಕ್ಷದಿಂದ ಟಿ.ವೆಂಕಟರಮಣಯ್ಯ, ಸ್ವತಂತ್ರ ಅಭ್ಯರ್ಥಿಗಳಾಗಿ ಆನಂದಮೂರ್ತಿ.ಜೆ ಇಬ್ರಾಹಿಂ ಷರೀಫ್ ತೂಬಗೆರೆ ಷರೀಫ್, ಇತರೆ ಪಕ್ಷದಿಂದ ಬಿ.ಶಿವಶಂಕರ್, ಗಂಗಮ್ಮ.ಎಂ ನಾಮಪತ್ರ ಸಲ್ಲಿಸಿದ್ದಾರೆ.