ಕರ್ನಾಟಕ

karnataka

ETV Bharat / state

ಪ್ರಾಣವಾಯು​ ಹೊತ್ತ 32ನೇ ರೈಲು ಬೆಂಗಳೂರಿಗೆ ಆಗಮನ

ಭಾರತೀಯ ರೈಲ್ವೆ ಇದುವರೆಗೆ 409 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಿದ್ದು, ದೇಶಾದ್ಯಂತ 1,684 ಟ್ಯಾಂಕರ್‌ಗಳಲ್ಲಿ ಸುಮಾರು 29,185 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಾಗಿಸಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ 15 ರಾಜ್ಯಗಳಿಗೆ ಸಹಕಾರ ನೀಡಿದೆ.

32nd-oxygen-express-train-arrived-in-bengaluru
ಪ್ರಾಣವಾಯು​ ಹೊತ್ತ 32ನೇ ರೈಲು ಬೆಂಗಳೂರಿಗೆ ಆಗಮನ

By

Published : Jun 13, 2021, 2:44 AM IST

ಬೆಂಗಳೂರು:ನಗರಕ್ಕೆ 119 ಟನ್ ಪ್ರಾಣವಾಯು ಹೊತ್ತ 32ನೇ ರೈಲು ಆಗಮಿಸಿದೆ. ಶನಿವಾರ ಸಂಜೆ 5 ಗಂಟೆ ವೇಳೆಗೆ ರೈಲು ವೈಟ್‌ಫೀಲ್ಡ್, ಒಳನಾಡಿನ ಕಂಟೈನರ್ ಡಿಪೋ ತಲುಪಿದೆ. ರೈಲು ಜೂನ್​ 11ರಂದು ಬೆಳಗ್ಗೆ 05:31ಕ್ಕೆ ಒಡಿಶಾದ ರೂರ್ಕೆಲಾದಿಂದ ಹೊರಟಿತ್ತು.

ರೈಲಿನಲ್ಲಿ 6 ಕ್ರಯೋಜೆನಿಕ್ ಕಂಟೇನರ್‌ಗಳಿಂದ 119.06 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಾಗಿಸಲಾಗಿದೆ. ಇಲ್ಲಿಯವರೆಗೆ ಕರ್ನಾಟಕಕ್ಕೆ ರೈಲಿನ ಮೂಲಕ 3,682.21 ಟನ್ ದ್ರವ ವೈದ್ಯಕೀಯ ಆಮ್ಲಜನಕ ತಲುಪಿದೆ.

ಭಾರತೀಯ ರೈಲ್ವೆ ಇದುವರೆಗೆ 409 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಿದ್ದು, ದೇಶಾದ್ಯಂತ 1,684 ಟ್ಯಾಂಕರ್‌ಗಳಲ್ಲಿ ಸುಮಾರು 29,185 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಾಗಿಸಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ 15 ರಾಜ್ಯಗಳಿಗೆ ಸಹಕಾರ ನೀಡಿದೆ.

ತಜ್ಞರಿಂದ ಕೊರೊನಾ ಮೂರನೇ ಅಲೆ ಎಚ್ಚರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ದೇಶದ ಕೆಲ ಪ್ರಮುಖ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ನೀಡುವ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ:'ಒಂದು ಭೂಮಿ, ಒಂದು ಆರೋಗ್ಯ' ಮಂತ್ರ: ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಕರೆ

ABOUT THE AUTHOR

...view details