ಬೆಂಗಳೂರು:ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು ಸದ್ಯ ಇದರಿಂದ ಪಾರಾಗಲು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ನಿಯಮ ಮೀರಿದವರ ವಿರುದ್ಧ ಪೊಲೀಸರು ಇಂದು ಕೂಡ ದಂಡ ಪ್ರಯೋಗ ಮಾಡುವ ಮೂಲಕ ಎಚ್ಚರಿಕೆ ನೀಡಿದರು.
ನಿಯಮ ಪಾಲನೆ ಮಾಡದವರಿಗೆ ಪೊಲೀಸರಿಂದ ದಂಡದ ಬಿಸಿ - Bangaluru latest news
ಬೆಂಗಳೂರು ನಗರದಲ್ಲಿ ನಿಯಮ ಪಾಲನೆ ಮಾಡದ 1,339 ಜನರ ವಿರುದ್ಧ ಪೊಲೀಸರು ಇಂದು 3,29,250 ರೂ.ದಂಡ ವಸೂಲಿ ಮಾಡಿದ್ದಾಾರೆ. ದಂಡದ ಮೊತ್ತ ಕಡಿಮೆಯಾದರೂ ಕೂಡ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕಿ ಬುದ್ಧಿ ಹೇಳುತ್ತಿದ್ದಾರೆ.
![ನಿಯಮ ಪಾಲನೆ ಮಾಡದವರಿಗೆ ಪೊಲೀಸರಿಂದ ದಂಡದ ಬಿಸಿ 3,29,250 fine collection in Bangaluru](https://etvbharatimages.akamaized.net/etvbharat/prod-images/768-512-9103908-895-9103908-1602172713348.jpg)
ನಿಯಮ ಪಾಲನೆ ಮಾಡದ 1,339 ಜನರಿಂದ 3,29,250 ರೂ.ದಂಡ ವಸೂಲಿ ಮಾಡಿದ್ದಾರೆ. ನಗರ ಆಯುಕ್ತ ಕಮಲ್ ಪಂಥ್ ಅವರ ಸೂಚನೆಯಂತೆ ದಂಡದ ಮೊತ್ತ ಕಡಿಮೆಯಾದರೂ ಕೂಡ ಪೊಲೀಸರು ಕಾರ್ಯಾಚರಣೆ ನಡೆಸಿ ಉತ್ತರ ವಿಭಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದ 483 ಜನರ ವಿರುದ್ಧ 1,20,750 ರೂ.ದಂಡ ಹಾಗೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳದ 31 ಜನರಿಂದ 7,750 ರೂ. ದಂಡ ವಸೂಲಿ ಮಾಡಿದ್ದಾರೆ.
ಇನ್ನು ಕೇಂದ್ರ ವಿಭಾಗದಲ್ಲಿ 469 ಜನರ ವಿರುದ್ಧ 1,12,250 ರೂ.ದಂಡ ವಸೂಲಿ ಮಾಡಿದ್ದಾರೆ. ಪಶ್ಚಿಮ ವಿಭಾಗದಲ್ಲಿ 356 ಜನರ ವಿರುದ್ಧ ಪ್ರಕರಣ ದಾಖಲಿಸಿ 89,000 ದಂಡ ಹಾಕಿದ್ದಾರೆ. ಈಶಾನ್ಯ ವಿಭಾಗ ಪೊಲೀಸರು ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ 44 ಕೇಸ್ ದಾಖಲಿಸಿ 11 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಸದ್ಯದ ದಂಡದ ಮೊತ್ತ 250 ಆಗಿದ್ದು, ಆದರೂ ಜನರು ಮಾತ್ರ ಬುದ್ಧಿ ಕಲಿಯದೆ ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದಾರೆ. ಹಾಗಾಗಿ ಪೊಲೀಸರು ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕಿ ಬುದ್ಧಿ ಹೇಳುತ್ತಿದ್ದಾರೆ.