ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿದ್ದಾರೆ ಕೊರೊನಾ 'ಸೂಪರ್ ಸ್ಪ್ರೆಡರ್ಸ್': 13 ಸೋಂಕಿತರಿಂದ 328 ಮಂದಿಗೆ ಸೋಂಕು - ರಾಜ್ಯದಲ್ಲಿದ್ದಾರೆ ಕೊರೊನಾ ಸೂಪರ್ ಸ್ಪ್ರೆಡರ್ಸ್

ಆರೋಗ್ಯ ಇಲಾಖೆಯ ಪ್ರಕಾರ, ಇಡೀ ರಾಜ್ಯಕ್ಕೆ ಕೊರೊನಾ ಹರಡಿದ್ದು ಸೂಪರ್ ಸ್ಪ್ರೆಡರ್ಸ್ ಅಂತ ಗೊತ್ತಾಗಿದೆ. ‌ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಅರ್ಧಕ್ಕಿಂತಲೂ ಹೆಚ್ಚು ಪಾಸಿಟಿವ್ ಕೇಸ್​ಗಳಿಗೆ ಇವರೇ ಕಾರಣವಾಗಿದ್ದಾರೆ.‌ ಹಾಗಾದರೆ, ಯಾರು ಈ ಸೂಪರ್ ಸ್ಪ್ರೆಡರ್ಸ್? ಇವರನ್ನು ಹಾಗೇಕೆ ಕರೆಯಲಾಗುತ್ತೆ?

corona positive cases
13 ಸೋಂಕಿತರಿಂದ 328 ಮಂದಿಗೆ ಸೋಂಕು

By

Published : May 8, 2020, 9:12 AM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ‌ ಅಟ್ಟಹಾಸ‌ ಮುಂದುವರಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಆರೋಗ್ಯ ಇಲಾಖೆ ಅದೆಷ್ಟೇ ಬಾರಿ ಎಚ್ಚರಿಸಿದರೂ ಅದ್ಯಾಕೋ ಏನೋ ಜನರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿಯೇ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ ಅನ್ನುವ ಅಂಶ ಗೊತ್ತಾಗಿದೆ.

13 ಸೋಂಕಿತರಿಂದ 328 ಮಂದಿಗೆ ಸೋಂಕು

ಆರೋಗ್ಯ ಇಲಾಖೆಯ ಪ್ರಕಾರ, ಇಡೀ ರಾಜ್ಯಕ್ಕೆ ಕೊರೊನಾ ಹರಡಿದ್ದು ಸೂಪರ್ ಸ್ಪ್ರೆಡರ್ಸ್ ಅಂತ ಗೊತ್ತಾಗಿದೆ. ‌ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಅರ್ಧಕ್ಕಿಂತಲೂ ಹೆಚ್ಚು ಪಾಸಿಟಿವ್ ಕೇಸ್​ಗಳಿಗೆ ಈ ಸೂಪರ್ ಸ್ಪ್ರೆಡರ್‌ಗಳೇ ಕಾರಣವಾಗಿದ್ದಾರೆ.‌

13 ಸೋಂಕಿತರಿಂದ 328 ಮಂದಿಗೆ ಸೋಂಕು

ಸೂಪರ್ ಸ್ಪ್ರೆಡರ್ಸ್ ಅಂದರೇನು?

ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಮಂದಿಗೆ ಸೋಂಕು ಹರಡಿರುವ ವ್ಯಕ್ತಿಯಾಗಿದ್ದು, ಇಂತಹ ರೋಗಿಗಳನ್ನು ಸೂಪರ್ ಸ್ಪ್ರೆಡರ್ ಎಂದು ಪರಿಗಣಿಸಲಾಗುತ್ತೆ. ಇಲ್ಲಿಯವರೆಗೆ ರಾಜ್ಯದಲ್ಲಿ 13 ಮಂದಿ ಈ ರೀತಿಯ ಸೋಂಕಿತರಿದ್ದಾರೆ. ಇವರು ಯಾರು ಅಂತ ನೋಡಿ.

ಎಷ್ಟು ಮಂದಿಗೆ ಹರಡಿದ್ದಾರೆ ಗೊತ್ತಾ?

13 ಸೋಂಕಿತರಿಂದ 328 ಮಂದಿಗೆ ಸೋಂಕು

P- 52 76

P- 221 37

P- 128 36

P- 419 29

P- 205 27

P- 533 20

P- 134 19

P- 556 19

P- 167 17

P- 125 14

P- 607 12

P- 247 11

P- 390 11

ರೋಗಿ ಸಂಖ್ಯೆ - 52 ಒಬ್ಬನಿಂದ ಬರೋಬ್ಬರಿ 76 ಮಂದಿಗೆ ಸೋಂಕು ಹರಡಿದೆ. ರೋಗಿ ಸಂಖ್ಯೆ -221 ರಿಂದ 37 ಮಂದಿಗೆ ಸೋಂಕು ಹರಡಿದೆ. ರೋಗಿ ಸಂಖ್ಯೆ- 128 ಒಟ್ಟು 36 ಮಂದಿಗೆ ಸೋಂಕು ತಗುಲಿದೆ.

ಹೀಗೆ ಈ 13 ಮಂದಿಯಿಂದ ಸೂಪರ್ ಸ್ಪ್ರೆಡರ್ ಗಳಿಂದ ಬರೋಬ್ಬರಿ 328 ಮಂದಿಗೆ ಕೊರೊನಾ ಸೋಂಕು ಹರಡಿದೆ. ಇನ್ನು ಮುಂದಾದರೂ ಎಚ್ಚರಿಕೆಯಿಂದ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ABOUT THE AUTHOR

...view details