ಬೆಂಗಳೂರು :ರಾಜ್ಯದಲ್ಲಿಂದು 78,742 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 326 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,83,459ಕ್ಕೆ ಏರಿಕೆಯಾಗಿದೆ.
ಈ ದಿನ 380 ಮಂದಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ ಒಟ್ಟು 29,36,039 ಮಂದಿ ಗುಣಮುಖರಾಗಿದ್ದಾರೆ. ಇಂದು ಸೋಂಕಿಗೆ 4 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 37,941ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 9,450 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.41ರಷ್ಟಿದ್ದರೆ, ಸಾವಿನ ಪ್ರಮಾಣ 1.22 ರಷ್ಟಿದೆ.
ಇನ್ನು, ರಾಜಧಾನಿಯಲ್ಲಿ 173 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 12,49,418ಕ್ಕೆ ಹೆಚ್ಚಳವಾಗಿದೆ. 87 ಜನರು ಗುಣಮುಖರಾಗಿದ್ದಾರೆ. 12,26,390 ಜನರು ಡಿಸ್ಜಾರ್ಜ್ ಆಗಿದ್ದಾರೆ. ಸೋಂಕಿನಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ 16,210ಕ್ಕೆ ಏರಿಕೆ ಆಗಿದೆ. 6,817 ಪ್ರಕರಣ ಸಕ್ರಿಯವಾಗಿವೆ.
ರೂಪಾಂತರಿ ಅಪಡೇಟ್ :ರೂಪಾಂತರಿ ಸೋಂಕಿನಲ್ಲಿ ಡೆಲ್ಟಾ ವೈರಸ್ 1,653 ರಷ್ಟತ್ತು. ಆದರೆ, ಇಂದು1,679ಕ್ಕೆ ಏರಿಕೆಯಾಗಿದೆ. ಡೆಲ್ಟಾ ಸಬ್ಲೈನ್ಏಜ್ 202ರಿಂದ 256ಕ್ಕೆ ಹಾಗೂ ಡೆಲ್ಟಾ ಸಬ್ ಲೈನ್ಏಜ್ AY.12H -14 ಇದಿದ್ದು 15ಕ್ಕೆ ಏರಿಕೆಯಾಗಿದೆ.
ಲ್ಫಾ- 155
ಬೇಟ- 08