ಬೆಂಗಳೂರು: ರಾಜ್ಯದಲ್ಲಿಂದು 1,26,670 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ 3,222 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,40,428ಕ್ಕೆ ಏರಿಕೆ ಕಂಡಿದೆ. ಅಲ್ಲದೇ ಪಾಸಿಟಿವಿಟಿ ದರ ಶೇ.2.54ರಷ್ಟಾಗಿದೆ.
COVID UPDATE: ಇಂದು 3,222 ಮಂದಿಗೆ ಪಾಸಿಟಿವ್..93 ಮಂದಿ ಬಲಿ - ಬೆಂಗಳೂರು ಕೊರೊನಾ
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ನಿಧಾನವಾಗಿ ಇಳಿಕೆ ಕಂಡು ಬರುತ್ತಿದೆ. ಇಂದು ಒಟ್ಟು 3,222 ಮಂದಿಗೆ ಸೋಂಕು ದೃಢವಾಗಿ 93 ಮಂದಿ ಮೃತಪಟ್ಟಿದ್ದಾರೆ.
COVID UPDATE
ಇಂದು 14,724 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 27,19,479 ಸೋಂಕಿತರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ 85,997 ಸಕ್ರಿಯ ಪ್ರಕರಣಗಳಿದ್ದು, ಇಂದು 93 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿಗೀಡಾದವರ ಸಂಖ್ಯೆ 34,929ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ ಶೇ.2.88ರಷ್ಟು ಇದೆ.
ಜೊತೆಗೆ 9 ಜಿಲ್ಲೆಯಲ್ಲಿ ಒಂದೂ ಸಾವಿನ ಪ್ರಕರಣ ಕಂಡು ಬಂದಿಲ್ಲ.
ಓದಿ:COVID Vaccination: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಚಿವ ಸದಾನಂದ ಗೌಡರಿಂದ ಸಿಕ್ತು ಸಿಹಿ ಸುದ್ದಿ