ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದರೆ, ಇತ್ತ ಸಾವಿನ ಸಂಖ್ಯೆಯಲ್ಲೂ ನಿಧಾನವಾಗಿ ಹೆಚ್ಚಳವಾಗ್ತಿದೆ. ಇಂದು ಒಂದೇ ದಿನ 32 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,614 ರಷ್ಟಿದೆ. ಇನ್ನು ಇಂದು ಟೆಸ್ಟಿಂಗ್ ಕಡಿಮೆ ಇದ್ದರೂ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 1,40,884 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, 46,426 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 35,64,108ಕ್ಕೆ ಏರಿಕೆಯಾಗಿದೆ.
41,703 ಸೋಂಕಿತರು ಗುಣಮುಖರಾಗಿದ್ದು, ಈ ತನಕ 31,62,977 ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 3,62,487 ರಷ್ಟಿದೆ. ಇವತ್ತಿನ ಪಾಸಿಟಿವಿಟಿ ರೇಟ್ 32.95% ರಷ್ಟಿದ್ದರೆ, ಡೆತ್ ರೇಟ್ 0.06% ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 926 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 364 ವಿದೇಶಿಗರು ಹೈ ರಿಸ್ಕ್ ದೇಶದಿಂದ ಆಗಮಿಸಿದ್ದಾರೆ.