ಬೆಂಗಳೂರು:ರಾಜ್ಯದಲ್ಲಿಂದು 3,146 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,12,784ಕ್ಕೆ ಏರಿಕೆ ಆಗಿದೆ. ಇತ್ತ ಸೋಂಕಿಗೆ 55 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 11,046ಕ್ಕೆ ಏರಿಕೆ ಆಗಿದೆ. ಇಂದು 7,384 ಸೋಂಕಿತರು ಗುಣಮುಖರಾಗಿದ್ದು, 7,33,558 ಜನರು ಡಿಸ್ಜಾರ್ಜ್ ಆಗಿದ್ದಾರೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತ ಪಟ್ಟಿದ್ದಾರೆ.
ಇನ್ನು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ದಿನದಿಂದ ಇಳಿಕೆಯಾಗುತ್ತಿದ್ದು, ಸದ್ಯ, 68,161 ಇದ್ದು 939 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಕಳೆದ 7 ದಿನಗಳಿಂದ 56,804 ಮಂದಿ ಹೋಂ ಐಸೋಲೇಷನ್ನಲ್ಲಿ ಇದ್ದಾರೆ. ಇತ್ತ ಸೋಂಕಿತರ ಸಂಪರ್ಕದಲ್ಲಿ ಇದ್ದವರ ಸಂಖ್ಯೆಯೂ ಇಳಿಕೆಯಾಗಿದೆ. ಪ್ರಾಥಮಿಕವಾಗಿ 3,69,269 ದ್ವಿತೀಯವಾಗಿ 3,49,636 ಜನರು ಸೋಂಕಿತರ ಸಂಪರ್ಕದಲ್ಲಿದ್ದಾರೆ.
ಬೆಂಗಳೂರಿನಲ್ಲಿಂದು ಸೋಂಕು ಇಳಿಕೆಯಾಗಿದ್ದು 1,612 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3,30,862ಕ್ಕೆ ಏರಿದೆ. 4,457 ಜನರು ಗುಣಮುಖರಾಗಿದ್ದು, 2,83,300 ಜನರು ಡಿಸ್ಜಾರ್ಜ್ ಆಗಿದ್ದಾರೆ. ಹಾಗೇ ಕೊರೊನಾಗೆ 23 ಜನರು ಮೃತರಾಗಿದ್ದು ಸಾವಿನ ಸಂಖ್ಯೆ 3,801ಕ್ಕೆ ಏರಿದೆ. ಸದ್ಯ 43,760 ಸಕ್ರಿಯ ಪ್ರಕರಣಗಳು ಇವೆ.