ಬೆಂಗಳೂರು: ಮಹಾಮಾರಿ ಕೊರೊನಾ ಆರ್ಭಟ ರಾಜ್ಯದಲ್ಲೂ ಜೋರಾಗಿದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 308 ಕೋವಿಡ್ ಪ್ರಕರಣ ದಾಖಲಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿಂದು 'ತ್ರಿಶತಕ' ಬಾರಿಸಿದ ಕೋವಿಡ್... ಮೂವರು ಸಾವು! - ಕೋವಿಡ್-19
ರಾಜ್ಯದಲ್ಲಿ ಇಂದು ಒಂದೇ ದಿನ 300ಕ್ಕೂ ಅಧಿಕ ಕೋವಿಡ್ ಪ್ರಕರಣ ದಾಖಲಾಗಿದ್ದು, ಮೂವರು ಮಾಹಾಮಾರಿಯಿಂದ ಸಾವನ್ನಪ್ಪಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು ಕೋವಿಡ್ ಸಂಖ್ಯೆ 6824 ಆಗಿದ್ದು, 3,029 ಸಕ್ರಿಯ ಪ್ರಕರಣಗಳಿವೆ. ಜತೆಗೆ 3,648 ಜನರು ಇಲ್ಲಿಯವರೆಗೆ ಗುಣಮುಖರಾಗಿದ್ದು, ಇಂದು 209 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜತೆಗೆ ಇಲ್ಲಿಯವರೆಗೆ 81 ಜನರು ಸಾವನ್ನಪ್ಪಿದ್ದಾರೆ. ಇಂದಿನ ಸೋಂಕಿತರಲ್ಲಿ 208 ಜನರು ಅಂತರ ರಾಜ್ಯ ಸಂಪರ್ಕ ಹೊಂದಿದ್ದಾಗಿ ತಿಳಿದು ಬಂದಿದೆ.
ಕಲಬುರಗಿಯಲ್ಲಿ 67, ಯಾದಗಿರಿ 52, ಬೀದರ್ 42, ಬೆಂಗಳೂರು ನಗರ 31, ದಕ್ಷಿಣ ಕನ್ನಡ 30, ಧಾರವಾಡ 20, ಉಡುಪಿ 14, ಹಾಸನ 11, ಬಳ್ಳಾರಿ 11, ವಿಜಯಪುರ 06, ರಾಯಚೂರು, ಉತ್ತರಕನ್ನಡ ತಲಾ 5, ಕೋಲಾರ 04, ದಾವಣಗೆರೆ 03, ಮಂಡ್ಯ, ಹಾವೇರಿಯಲ್ಲಿ ತಲಾ 02,ಮೈಸೂರು, ಬಾಗಲಕೋಟೆ, ರಾಮನಗರದಲ್ಲಿ ತಲಾ 1 ಕೇಸ್ ಕಂಡು ಬಂದಿವೆ. ಬೆಳಗಾವಿಯಲ್ಲಿ ಯಾವುದೇ ಕೊರೊನಾ ಕೇಸ್ ಕಾಣಿಸಿಕೊಂಡಿಲ್ಲ.