ಬೆಂಗಳೂರು:ರಾಜ್ಯರಾಜಧಾನಿಯಲ್ಲಿ ಕೊರೊನಾ ಪ್ರರಕಣಗಳು ನಿಯಂತ್ರಣಕ್ಕೆ ಸಿಗದಂತೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3,017 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಈ ಹಿಂದಿನ 24 ಗಂಟೆಗಳಲ್ಲಿಯೂ 3,509 ಕೋವಿಡ್ ಕೇಸ್ಗಳು ಪತ್ತೆಯಾಗಿದ್ದವು. ಈಗ ಮತ್ತೆ ಮೂರು ಸಾವಿರ ಗಡಿ ದಾಟಿದೆ. ನಗರದಲ್ಲಿ ಪ್ರಸ್ತುತ 24,600 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 4,636 ಮಂದಿ ಮೃತಪಟ್ಟಿದ್ದಾರೆ. 4,12,006 ಮಂದಿ ಗುಣಮುಖರಾಗಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ 4,44,259ಕ್ಕೆ ಏರಿಕೆಯಾಗಿದೆ.