ಬೆಂಗಳೂರು: ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ದಾಖಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ವರ್ಗಾವಣೆಯಾಗಿದೆ. ಐದು ವರ್ಷ ಒಂದೇ ಠಾಣೆಯಲ್ಲಿದ್ದವರಿಗೆ ವರ್ಗಾವಣೆ ಮಾಡಲಾಗಿದೆ. ಒಂದೇ ದಿನ ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿ ಸಿಬ್ಬಂದಿಯನ್ನ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಪಿಎಸ್ಐನಿಂದ ಹಿಡಿದು ಕಾನ್ಸ್ಟೇಬಲ್ವರೆಗೂ ವರ್ಗಾವಣೆ ಮಾಡಿ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಆದೇಶ ಹೊರಡಿಸಿದ್ದಾರೆ.
ನಗರ ಪೊಲೀಸ್ ಇಲಾಖೆ: ಒಂದೇ ದಿನ ದಾಖಲೆಯ ಮೂರು ಸಾವಿರ ಪೊಲೀಸರ ವರ್ಗಾವಣೆ...! - ಪೊಲೀಸ್ ಇಲಾಖೆಯಲ್ಲಿ ಮೂರು ಸಾವಿರ ಪೊಲೀಸರ ವರ್ಗಾವಣೆ
ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ ದಾಖಲೆಯ ಮೂರು ಸಾವಿರ ಪೊಲೀಸರ ವರ್ಗಾವಣೆಯಾಗಿದೆ.
ಪೊಲೀಸ್ ಇಲಾಖೆ
ಓದಿ:ಪೊಲೀಸ್ ಸಿಬ್ಬಂದಿ ವರ್ಗಾವಣೆ ಹಿನ್ನೆಲೆ ರಾತ್ರಿಯಿಡಿ ಸಿಬ್ಬಂದಿಗಳೊಂದಿಗೆ ನಿಶಾ ಜೇಮ್ಸ್ ಕೌನ್ಸೆಲಿಂಗ್
ಮೊದಲ ಬಾರಿ ಈ ಸಂಖ್ಯೆಯಲ್ಲಿ ವರ್ಗಾವಣೆ:ವರ್ಗಾವಣೆಯಾದವರಲ್ಲಿ ಒಟ್ಟು 1,749 ಕಾನ್ಸ್ಟೇಬಲ್, 1,292 ಹೆಡ್ ಕಾನ್ಸ್ಟೇಬಲ್, 43 ಎಎಸ್ಐ ಹಾಗೂ 163 ಪಿಎಸ್ಐಗಳಿದ್ದಾರೆ. ಈ ಮಟ್ಟದ ವರ್ಗಾವಣೆ ಇಲಾಖೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಯಾಗಿದೆ ಎನ್ನಲಾಗಿದೆ.