ಬೆಂಗಳೂರು:ಕೊರೊನಾ ಭೀತಿಗೆ ಬೆಚ್ಚಿ ಬಿದ್ದಿರುವ ಸಾರ್ವಜನಿಕರು ಸಾರಿಗೆ ಸೇವೆಗಳಿಗೆ ವಿದಾಯ ಹೇಳುತ್ತಿದ್ದಾರೆ.
300 ಕೆಎಸ್ಆರ್ಟಿಸಿ ಬಸ್ಗಳ ಸೇವೆ ಸ್ಥಗಿತ ಕೊರೊನಾ ಕಾರಣ ಕೆಎಸ್ಆರ್ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 300 ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬೆಳಿಗ್ಗೆಯಿಂದ 300 ಬಸ್ಗಳನ್ನು ನಿಲ್ಲಿಸಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಬಸ್ಗಳ ಕಾರ್ಯಾಚರಣೆ ಮಾಡಲಾಗುತ್ತದೆ ಅಂತ ಕೆಎಸ್ಆರ್ಟಿಸಿ ಸಂಚಾರಿ ವಿಭಾಗದ ಮುಖ್ಯಸ್ಥ ಪ್ರಭಾಕರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಕೊರೊನಾ ಎಫೆಕ್ಟ್ನಿಂದ ಕೆಎಸ್ಆರ್ಟಿಸಿ ಪ್ರಯಾಣಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತ ಬೆಂಗಳೂರಿನಲ್ಲಿ ಕೊರೊನಾ ಭೀತಿಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಸುಮಾರು ಶೇ. 70 ರಿಂದ 80 ಸಾವಿರ ಪ್ರಯಾಣಿಕರ ಪ್ರಮಾಣ ಕುಸಿದಿದೆ. ಕಳೆದ ಎರಡು ದಿನಗಳಿಂದ ಮೆಟ್ರೋ ಬೋಗಿಗಳು ಖಾಲಿ ಖಾಲಿಯಾಗಿದ್ದು, ಇವತ್ತೂ ಕೂಡ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ನಿತ್ಯ 4 ಲಕ್ಷ ಪ್ರಯಾಣಿಕರು ಮೆಟ್ರೋ ಬಳಸುತ್ತಿದ್ದರು, ಆದ್ರೆ ಎರಡು ಮೂರು ದಿನಗಳಿಂದ 3 ಲಕ್ಷ 20 ಸಾವಿರ ಬರುತ್ತಿದ್ದಾರೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ ಹಿನ್ನಲೆ ಎಚ್ಚೆತ್ತುಕೊಂಡ ಬೆಂಗಳೂರು ಮೆಟ್ರೋ ನಿಗಮ, ಪ್ರಯಾಣಿಕರ ಬಾರದ ಕಾರಣ ಮೆಟ್ರೋ 8 ನಿಮಿಷಕ್ಕೆ ಬದಲಾಗಿ 10 ನಿಮಿಷಕ್ಕೆ ಓಡಾಟ ನಿರ್ಧಾರ ಮಾಡಲಾಗಿದೆ.
ಈ ಮೊದಲು ನೇರಳೆ ಹಾಗೂ ಹಸಿರು ಮಾರ್ಗದಲ್ಲಿ 8 ನಿಮಿಷಕ್ಕೊಂದು ಮೆಟ್ರೋ ಓಡಾಟ ಮಾಡಲಾಗುತ್ತಿದ್ದು, ಇದೀಗ ಪ್ರಯಾಣಿಕರು ಬಾರದ ಕಾರಣ 10 ನಿಮಿಷಕ್ಕೊಂದು ಮೆಟ್ರೋ ಓಡಿಸಲು ಮುಂದಾಗಿದ್ದಾರೆ.