ಕರ್ನಾಟಕ

karnataka

ETV Bharat / state

ಕೇವಲ 300 ರೂ. ಬಡ್ಡಿ ಕೊಡಲಿಲ್ಲ ಎಂದು ಸ್ನೇಹಿತನ ಕತ್ತುಕೊಯ್ದು ಕೊಲೆ ಮಾಡಿದ ಆರೋಪಿ ಅರೆಸ್ಟ್..!​ - Arrest accused of killing a friend

ಕೇವಲ 300 ರೂ. ಬಡ್ಡಿ ಹಣ ಕೊಡಲಿಲ್ಲ ಎಂದು ಸ್ನೇಹಿತನ ಕತ್ತುಕೊಯ್ದು ಕೊಲೆ ಮಾಡಿದ ಆರೋಪಿಯನ್ನ ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೇವಲ 300 ರೂ. ಬಡ್ಡಿ ಕೊಡಲಿಲ್ಲವೆಂದು ಸ್ನೇಹಿತನ ಕತ್ತುಕೊಯ್ದು ಕೊಲೆಗೈದಿದ್ದ ಆರೋಪಿ ಅರೆಸ್ಟ್..!​

By

Published : Aug 10, 2019, 5:25 PM IST

ಬೆಂಗಳೂರು:ಕೇವಲ 300 ರೂ. ಬಡ್ಡಿ ಹಣ ಕೊಡಲಿಲ್ಲ ಎಂದು ಸ್ನೇಹಿತನ ಕತ್ತುಕೊಯ್ದು ಕೊಲೆ ಮಾಡಿದ ಆರೋಪಿಯನ್ನ ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೇವಲ 300 ರೂ. ಬಡ್ಡಿ ಕೊಡಲಿಲ್ಲವೆಂದು ಸ್ನೇಹಿತನ ಕತ್ತುಕೊಯ್ದು ಕೊಲೆ ಮಾಡಿದ್ದ ಆರೋಪಿ ಅರೆಸ್ಟ್..!​

ಮಣಿ ಬಂಧಿತ ಆರೋಪಿ. ಮಣಿ ಹಾಗೂ ವಿನ್ಸೆಂಟ್ ಪರಸ್ಪರ ಪರಿಚಿತರಾಗಿದ್ದು, ಕಷ್ಟಕಾಲದಲ್ಲಿ ಮಣಿಯಿಂದ ವಿನ್ಸೆಂಟ್ 50 ಸಾವಿರ ರೂಪಾಯಿ ಪಡೆದಿದ್ದ. ವಿನ್ಸೆಂಟ್ ವಾರಕ್ಕೆ 300 ರೂ. ಬಡ್ಡಿ ನೀಡಬೇಕಿತ್ತು. ಆದರೆ ವಿನ್ಸೆಂಟ್​ ಬಡ್ಡಿ ಹಣ ನೀಡದೇ ಇದ್ದಿದ್ದರಿಂದ ಆಗಸ್ಟ್ 2ರಂದು ದೊಮ್ಮಲೂರಿನ ಕೆನರಾ ಬ್ಯಾಂಕ್ ಬಳಿ ಇಬ್ಬರೂ ಕಿತ್ತಾಡಿಕೊಂಡಿದ್ದರು. ಈ ವೇಳೆ, ವಿನ್ಸೆಂಟ್ ಮಣಿ ಮೇಲೆ ಹಲ್ಲೆ ಸಹ ಮಾಡಿದ್ದ. ಬಳಿಕ ಸಿಟ್ಟಿಗೆದ್ದ ಮಣಿ ಬೈಕ್ ಹತ್ತಿ ಹೊರಡುತ್ತಿದ್ದ ವಿನ್ಸೆಂಟ್​ನ ಕತ್ತು ಕೊಯ್ದಿದ್ದ. ಬಳಿಕ ವಿನ್ಸೆಂಟ್​ನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರು ಠಾಣಾ ಪೊಲೀಸರು, ರಾಮಮೂರ್ತಿ ನಗರದ ಪರಿಚಿತರ ಮನೆಯಲ್ಲಿ ಅಡಗಿ‌ ಕುಳಿತಿದ್ದ ಆರೋಪಿಯನ್ನ ಬಂಧಿಸಿದ್ದಾರೆ‌.

ABOUT THE AUTHOR

...view details