ಬೆಂಗಳೂರು : ರಾಜ್ಯ ಸರಕಾರವು ಕಲ್ಯಾಣ ಕರ್ನಾಟಕದ ಕೊಪ್ಪಳದಲ್ಲಿ ನಿರ್ಮಿಸುತ್ತಿರುವ ‘ಆಟಿಕೆ ಕ್ಲಸ್ಟರ್’ನಿಂದ ಸುಮಾರು 30 ಸಾವಿರ ನೇರ ಉದ್ಯೋಗ ಮತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಪರೋಕ್ಷ ಉದ್ಯೋಗ ಅವಕಾಶ ದೊರೆಯಲಿದೆ.
ಕೊಪ್ಪಳ ಆಟಿಕೆ ಕ್ಲಸ್ಟರ್ನಿಂದ ದೊರೆಯಲಿದೆ ಜನರ ಕೈಗೆ 30 ಸಾವಿರ ನೇರ ಉದ್ಯೋಗ..! - ಕೊಪ್ಪಳ ಆಟಿಕೆ ಕ್ಲಸ್ಟರ್ ಉದ್ಯೋಗ,
ಕೊಪ್ಪಳದಲ್ಲಿ ತೆಲೆಯೆತ್ತಿರುವ ಆಟಿಕೆ ಕ್ಲಸ್ಟರ್ನಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ನೇರವಾಗಿ ದೊರೆಯಲಿದೆ.
ಕೊಪ್ಪಳ ಆಟಿಕೆ ಕ್ಲಸ್ಟರ್ನಿಂದ ದೊರೆಯಲಿದೆ ಜನರ ಕೈಗೆ 30 ಸಾವಿರ ನೇರ ಉದ್ಯೋಗ
ಸ್ಥಳೀಯ ಜನರಿಗೆ ಉದ್ಯೋಗಾವಕಾಶ ದೊರೆಯಲಿ ಮತ್ತು ಆಟಿಕೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕೆನ್ನುವ ಉದ್ದೇಶದಿಂದ ಆತ್ಮ ನಿರ್ಭರ್ ಯೋಜನೆಯಡಿ ರಾಜ್ಯ ಸರಕಾರ ಕೈಗಿತ್ತಿಕೊಂಡಿರುವ ದೇಶದ ಮೊದಲನೆ ‘ಆಟಿಕೆ ಕ್ಲಸ್ಟರ್’ ಹಲವಾರು ವೈಶಿಷ್ಟ್ಯಗಳಿಂದ ಗುರುತಿಸಿಕೊಳ್ಳಲಿದೆ.
- ಕೊಪ್ಪಳ ಜಿಲ್ಲೆ ಬಾಣಾಪುರದಲ್ಲಿ ತಲೆಯೆತ್ತಲಿರುವ ಆಟಿಕೆ ಕ್ಲಸ್ಟರ್ 400 ಎಕರೆ ವಿಸ್ತೀರ್ಣ ಹೊಂದಲಿದೆ.
- 100 ಆಟಿಕೆ ತಯಾರಿಕಾ ಘಟಕಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗುತ್ತದೆ
- ಏಕಸ್ ಎಸ್ಇಜಡ್ ಖಾಸಗಿ ಕಂಪನಿ ಸಹಭಾಗಿತ್ವದೊಂದಿಗೆ ಕ್ಲಸ್ಟರ್ ನಿರ್ಮಾಣಕ್ಕೆ ಸರಕಾರದ ಒಡಂಬಡಿಕೆ
- ಎರಡನೂರು ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆಯ ಆರು ಖಾಸಗಿ ಕಂಪನಿಗಳ ಜತೆ ಒಪ್ಪಂದಕ್ಕೆ ಸಹಿ ಹಾಕಿದ ಸರಕಾರ
- ರಿಮೋಟ್ ಕಂಟ್ರೋಲ್ ಆಟಿಕೆ ಕಾರ್ ಉತ್ಪಾದಿಸುವ ಪ್ಲೇಗ್ರೋ ಕಂಪನಿಯಿಂದ 15 ಮಿಲಿಯನ್ ಡಾಲರ್ ಹೂಡಿಕೆ
- ಏಕಸ್ ಕಂಪನಿಯಿಂದ 80 ಮಿಲಿಯನ್ ಡಾಲರ್, ನ್ಯೂ ಹಾರಿಜನ್ ಕಂಪನಿ 10 ಮಿಲಿಯನ್ ಡಾಲರ್, ಹಾಟ್ ಶಾಟ್ ಟೂಲಿಂಗ್ ಮತ್ತು ಇಂಜಿನೀಯರಿಂಗ್ನಿಂದ 6 ಮಿಲಿಯನ್ ಡಾಲರ್, ಏಕಸ್ ಫೋರ್ಸ ಕನ್ಸೂಮರ್ ಕಂಪನಿಯಿಂದ 60 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಒಪ್ಪಂದ
- 5 ವರ್ಷಗಳಲ್ಲಿ ಕ್ಲಸ್ಟರ್ಗೆ 450 ಮಿಲಿಯನ್ ಡಾಲರ್ ಬಂಡವಾಳ ಆಕರ್ಷಿಸಲು ಸರಕಾರದ ಗುರಿ
- ಕ್ಲಸ್ಟರ್ನಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಲು ಖಾಸಗಿ ಕಂಪನಿಗಳಿಗೆ ಸರಕಾರದ ಷರತ್ತು
- ಈ ವರ್ಷದ ಅಂತ್ಯದೊಳಗೆ ಕೊಪ್ಪಳದ ಆಟಿಕೆ ಕ್ಲಸ್ಟರ್ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಪ್ರಧಾನಿಯಿಂದ ಲೋಕಾರ್ಪಣೆಗೊಳಿಸುವ ಉದ್ದೇಶವನ್ನು ಬಿಜೆಪಿ ಸರಕಾರ ಹೊಂದಿದೆ