ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 30 ಸಾವಿರ ಕೋಟಿ ರೂ.ಹೂಡಿಕೆ, 60 ಸಾವಿರ ಉದ್ಯೋಗ ಸೃಷ್ಟಿ: ಶೆಟ್ಟರ್ - ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ

ಕೋವಿಡ್-19 ನಿಂದಾಗಿ ಕುಂಠಿತಗೊಂಡಿದ್ದ ಕೈಗಾರಿಕಾ ಕ್ಷೇತ್ರದ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಹೂಡಿಕೆ ಸ್ನೇಹಿ ವಾತಾವರಣ ಸೃಷ್ಟಿಗೆ ಪ್ರಯತ್ನಿಸುತ್ತಿದೆ. ಇದಕ್ಕೆ ಪೂರಕವಾಗಿ ಕಾಯ್ದೆಗಳ ತಿದ್ದುಪಡಿ ಮಾಡಿದ್ದು, ನೂತನ ಕೈಗಾರಿಕಾ ನೀತಿಯನ್ನು ಜಾರಿಗೆ ತಂದು ಹೂಡಿಕೆದಾರರನ್ನು ಸೆಳೆಯಲು ಮುಂದಾಗಿದೆ.

Shetter
ನೂತನ

By

Published : Dec 1, 2020, 8:01 PM IST

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ರಾಜ್ಯ ಹೂಡಿಕೆ ಸ್ನೇಹಿ ವಾತಾವರಣ ಸೃಷ್ಟಿಸುವಲ್ಲಿ ಸಫಲವಾಗಿದ್ದು, 30 ಸಾವಿರ ಕೋಟಿ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಈಟಿವಿ ಭಾರತ್ ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 30 ಸಾವಿರ ಕೋಟಿ ರೂ.ಹೂಡಿಕೆ, 60 ಸಾವಿರ ಉದ್ಯೋಗ ಸೃಷ್ಟಿ: ಶೆಟ್ಟರ್
ಕೋವಿಡ್-19 ನಿಂದಾಗಿ ಕುಂಠಿತಗೊಂಡಿದ್ದ ಕೈಗಾರಿಕಾ ಕ್ಷೇತ್ರದ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಹೂಡಿಕೆ ಸ್ನೇಹಿ ವಾತಾವರಣ ಸೃಷ್ಟಿಗೆ ಪ್ರಯತ್ನಿಸುತ್ತಿದೆ. ಇದಕ್ಕೆ ಪೂರಕವಾಗಿ ಕಾಯ್ದೆಗಳ ತಿದ್ದುಪಡಿ ಮಾಡಿದ್ದು, ನೂತನ ಕೈಗಾರಿಕಾ ನೀತಿಯನ್ನು ಜಾರಿಗೆ ತಂದು ಹೂಡಿಕೆದಾರರನ್ನು ಸೆಳೆಯಲು ಮುಂದಾಗಿದೆ.ಕಾಯ್ದೆಗಳ ತಿದ್ದುಪಡಿ:ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡಿ ಹೂಡಿಕೆಗೆ ಇರುವ ವ್ಯವಸ್ಥೆಯನ್ನು ಸರಳೀಕರಣಗೊಳಿಸಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ, ಕೈಗಾರಿಕಾ ಕಾಯ್ದೆಗೆ ತಿದ್ದುಪಡಿ, ಕಾರ್ಮಿಕ ಕಾನೂನಿಗೂ ತಿದ್ದುಪಡಿ ತಂದು ಕೈಗಾರಿಕೆಗಳ ಬೆಳವಣಿಗೆಗೆ ಎಲ್ಲ ರೀತಿಯ ಬದಲಾವಣೆ ತರಲಾಗಿದೆ. ಇದರೊಂದಿಗೆ ಹೊಸದಾಗಿ ಕೈಗಾರಿಕಾ ನೀತಿಯನ್ನು ತರಲಾಗಿದೆ. 2020-25 ರವರೆಗೆ ಐದು ವರ್ಷಕ್ಕೆ ಅನ್ವಯವಾಗುವ ನೀತಿಯನ್ನು ತಂದಿದೆ.ಹೂಡಿಕೆ ಮಾಡುತ್ತಿರುವ ಕಂಪನಿಗಳು:ಜೆಎಸ್ ಡಬ್ಲ್ಯೂ ಮೆಟಾಲಿಕ್ಸ್ - 13,026 ಕೋಟಿ ರೂ.ಸೆರುಲಿಯನ್ ಸೊಲ್ಯೂಷನ್- 1,347 ಕೋಟಿ ರೂ.ಸಿಮನ್ಸ್ ಹೆಲ್ತ್ ಕೇರ್ -1,085 ಕೋಟಿ ರೂ.ಎಪ್ಸಿಲಾನ್ ಕಾರ್ಬನ್ -900 ಕೋಟಿ ರೂ.ಜೆಎಸ್ ಡಬ್ಲ್ಯೂ ಟೆಕ್ನೋ - 892 ಕೋಟಿ ರೂ.ವಿನ್ಯಾ ಸ್ಟೀಲ್ಸ್ -761 ಕೋಟಿ ರೂ.ಟಿಸಿಎಸ್ ಎಸ್ಇಝಡ್ - 495 ಕೋಟಿ ರೂ.ಇಂಡಿಯಾ ಸ್ಯಾಟ್ ಕಾಂ- 419 ಕೋಟಿ ರೂ.60 ಸಾವಿರ ಉದ್ಯೋಗ ಸೃಷ್ಟಿ:ಕೈಗಾರಿಕಾ ಸ್ನೇಹಿ ರಾಜ್ಯ ನಮ್ಮದಾಗಿದ್ದು, ಅದಕ್ಕೆ ಪೂರಕವಾಗಿ ಹೆಚ್ಚಿನ ಪರಿಣಾಮಕಾರಿಯಾಗಿ ಸುಧಾರಣೆ ಮಾಡುವ ಕೆಲಸ ಮಾಡಿದ್ದೇವೆ. ಹೂಡಿಕೆ ವಲಯಕ್ಕೆ ಸಂಬಂಧಿಸಿದಂತೆ ಈಗ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವ ಜಗದೀಶ್ ಹೇಳಿದ್ದಾರೆ.ಈಸ್ ಆಫ್ ಡೂ ನಿಂದ ಬ್ಯುಸಿನೆಸ್ ಅನ್ನು ಕೂಡ ಅನುಷ್ಠಾನ ಮಾಡುವ ಕೆಲಸ ಆಗುತ್ತಿದೆ. ಕೊರೊನಾದಿಂದ ಕೈಗಾರಿಕಾ ವಲಯ ಭಾರಿ ಸಂಕಷ್ಟ ಎದುರಿಸಬೇಕಾಗುತ್ತಿದೆ. ಈಗ ಮೂರ್ನಾಲ್ಕು ತಿಂಗಳಿನಲ್ಲಿ 30 ಸಾವಿರ ಕೋಟಿ ರೂ. ಹೂಡಿಕೆಗೆ ಒಡಂಬಡಿಕೆಯಾಗಿದೆ. ಅದಕ್ಕೆ ಒಪ್ಪಿಗೆಯನ್ನೂ ಕೊಟ್ಟಿದ್ದೇವೆ. ಇದರಿಂದ 60 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ಆಶಾಕಿರಣವಾಗಿ ಹೆಚ್ಚಿನ ಹೂಡಿಕೆ ಹರಿದು ಬರುತ್ತಿದೆ. ನಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿದ್ದು, ಚೈನಾದಿಂದ ಹೊರ ಬಂದ ಕಂಪನಿಗಳನ್ನು ಇಲ್ಲಿಗೆ ಬರುವಂತೆ ಆಕರ್ಷಿಸುವ ಕೆಲಸ ನಡೆಯುತ್ತಿದೆ ಎಂದರು.ದಾವೂಸ್ ಪ್ರವಾಸ ಸುಧಾರಣೆಗೆ ಪೂರಕ:ದಾವೂಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ನಾವು ಭಾಗವಹಿಸಿದ್ದರಿಂದ ನಮ್ಮ ರಾಜ್ಯದಲ್ಲಿ ಹೂಡಿಕೆಗೆ ಇದ್ದ ನ್ಯೂನತೆ ಪರಿಹರಿಸಿಕೊಳ್ಳಲು ಹಾಗು ಇದ್ದ ಹಲವಾರು ಕುಂದು ಕೊರತೆ ನಿವಾರಿಸಿಕೊಳ್ಳಲು ಅನುಕೂಲವಾಯಿತು. ದಾವೂಸ್ ನಿಂದ ಬಂದ ನಂತರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹೆಚ್ಚು ಹೆಚ್ಚು ಪರಿಣಾಮಕಾರಿ ಕೆಲಸ ಮಾಡುತ್ತಿದ್ದೇವೆ ಎಂದು ಶೆಟ್ಟರ್ ಮಾಹಿತಿ ನೀಡಿದರು.ಕಳೆದ ಆರ್ಥಿಕ ವರ್ಷಕ್ಕಿಂತ ಹೆಚ್ಚಿನ ಹೂಡಿಕೆ ನಿರೀಕ್ಷೆ:ಹೂಡಿಕೆ ಮಾಡಲು ಭೂಮಿ, ಕೈಗಾರಿಕೆ ಸ್ಥಾಪಿಸಲು ಅಗತ್ಯ ಮೂಲ ಸೌಕರ್ಯ ಸೇರಿದಂತೆ ಎಲ್ಲವನ್ನು ಮಾಡುತ್ತಿದ್ದೇವೆ. ಹೂಡಿಕೆದಾರರಿಗೆ ಸ್ಥಳೀಯರಿಗೆ ಉದ್ಯೋಗ ಕೊಡುವ ಷರತ್ತನ್ನು ಮಾತ್ರ ಹಾಕಿದ್ದೇವೆ ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಇಡೀ ಜಗತ್ತಿಗೇ ಕೊರೊನಾದಿಂದ ಹಿನ್ನಡೆಯಾಗಿದೆ. ಅದರಂತೆ ಕರ್ನಾಟಕದಲ್ಲಿಯೂ ಆಗಿದೆ. ಇತ್ತೀಚಿನ ಬೆಳವಣಿಗೆ ನೋಡಿದಾಗ ಈ ಆರ್ಥಿಕ ವರ್ಷದ ಅಂತ್ಯಕ್ಕೆ ಕಳೆದ ಬಾರಿಗಿಂತ ಹೆಚ್ಚಿನ ಹೂಡಿಕೆ ಪ್ರತಿಕ್ರಿಯೆ ಸಿಗುವುದಾಗಿ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details