ಬೆಂಗಳೂರು:ಮೈ ಮೇಲೆ ಚಿನ್ನ ಹಾಕಿಕೊಂಡರೆ ಸರಗಳ್ಳರ ಹಾವಳಿ. ಅದೇ ಚಿನ್ನ ಮನೆಯಲ್ಲಿಟ್ಟರೆ ಮನೆಗಳ್ಳರ ಕಾಟ.. ಇವರಿಬ್ಬರಿಂದ ತಪ್ಪಿಸಿಕೊಳ್ಳಲು ಬ್ಯಾಂಕ್ನಲ್ಲಿಟ್ಟರೇ ಅಲ್ಲಿಯೂ ಸುರಕ್ಷತೆ ಇಲ್ಲದಂತಾಗಿದೆ. ಹೌದು, ಬ್ಯಾಂಕ್ನ ಸೇಫ್ ಲಾಕರ್ನಿಂದ 30 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.
ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಬ್ಯಾಂಕ್ನ ಲಾಕರ್ನಲ್ಲಿಟ್ಟಿದ್ದ 580 ಗ್ರಾಂ ಚಿನ್ನ ಮಾಯವಾಗಿದ್ದು, ಈ ಸಂಬಂಧ ದೂರುದಾರ ಬಿಎನ್ ಕೃಷ್ಣಕುಮಾರ್ ದೂರು ನೀಡಿದ್ದಾರೆ. ಸಂತ್ರಸ್ತ ನೀಡಿದ ದೂರಿನ ಮೇರೆಗೆ ಬ್ಯಾಂಕ್ ಮ್ಯಾನೇಜರ್ ಪ್ರದೀಪ್, ಕಸ್ಟೋಡಿಯನ್ಗಳಾದ ಸೌಮ್ಯ ಹಾಗೂ ನಳನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೃಷ್ಣಕುಮಾರ್ ಕಳೆದ 10 ವರ್ಷಗಳ ಹಿಂದೆ ಕರ್ನಾಟಕ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದಿದ್ದರು. ಕೃಷ್ಣಕುಮಾರ್ನ ಮಗ ಮೂರು ವರ್ಷಗಳಿಂದ ಜರ್ಮನಿಯಲ್ಲಿ ವಾಸವಿದ್ದರು. ಕೃಷ್ಣಕುಮಾರ್ ತಮ್ಮ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ಸುರಕ್ಷತೆಗಾಗಿ ಕರ್ನಾಟಕ ಬ್ಯಾಂಕ್ನಲ್ಲಿ ಸೇಫ್ ಲಾಕರ್ ತೆರೆದಿದ್ದರು. ಕೆಲ ತಿಂಗಳ ಹಿಂದೆ 30 ಲಕ್ಷ ಮೌಲ್ಯದ 580 ಗ್ರಾಂ ಚಿನ್ನವನ್ನು ಲಾಕರ್ನಲ್ಲಿ ಇರಿಸಿದ್ದರು.