ಕರ್ನಾಟಕ

karnataka

ETV Bharat / state

ಕೋವಿಡ್​ 2ನೇ ಅಲೆಯಿಂದ ರಾಜ್ಯದಲ್ಲಿ 30 ಲಕ್ಷ ಜನಕ್ಕೆ ಉದ್ಯೋಗ ನಷ್ಟ: ಪೆರಿಕಲ್ ಎಂ.ಸುಂದರ್ - 30 lakh People lost jobs at due to covid second wave

ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 2.44 ಲಕ್ಷ ಕೋಟಿ ರೂಪಾಯಿ ಆದಾಯ ಪಡೆದಿವೆ. ಹೀಗಾಗಿ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಒಳಗಾಗಿರುವ ಉದ್ಯಮದ ಪುನಶ್ಚೇತನಕ್ಕೆ ಶೇ.10ರಷ್ಟು ಹಣ ಬಳಸಿಕೊಂಡು ಪ್ಯಾಕೇಜ್ ಘೋಷಣೆ ಮಾಡುವಂತೆ ಎಫ್​ಕೆಸಿಸಿಐ ಒತ್ತಾಯಿಸಿದೆ.

perikal-m-sundar
ಪೆರಿಕಲ್ ಎಂ.ಸುಂದರ್

By

Published : Jun 17, 2021, 9:17 PM IST

ಬೆಂಗಳೂರು:ಕೋವಿಡ್​ ಎರಡನೇ ಅಲೆಯಿಂದ ರಾಜ್ಯದಲ್ಲಿ ಮೂವತ್ತು ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಎಫ್​ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಹೇಳಿದ್ದಾರೆ. ಕೊರೊನಾದಿಂದ ಕೈಗಾರಿಕರಗಳು, ಸಣ್ಣಪುಟ್ಟ ವ್ಯಾಪಾರಸ್ಥರು,ಮಾಲ್​ಗಳು, ಬೀದಿ ಬದಿ ವ್ಯಾಪಾರಿಗಳಿಗೂ ಸಾಕಷ್ಟು ತೊಂದರೆಯಾಗಿದೆ ಎಂದಿದ್ದಾರೆ.

ಪೆರಿಕಲ್ ಎಂ.ಸುಂದರ್

ನಗರದಲ್ಲಿ ಮಾತನಾಡಿದ ಎಫ್​ಕೆಸಿಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್, ಜಿಎಸ್ಟಿ ರೂಪದಲ್ಲಿ ಸುಮಾರು 84 ಸಾವಿರ ಕೋಟಿ, ರಾಜ್ಯ ಅಬಕಾರಿ ತೆರಿಗೆಯಿಂದ 24 ಸಾವಿರ ಕೋಟಿ, ಪೆಟ್ರೋಲ್ ಮತ್ತು ಡೀಸೆಲ್​ನಿಂದ 16 ಸಾವಿರ ಕೋಟಿ, ಆದಾಯ ತೆರಿಗೆಯಿಂದ 1.20 ಲಕ್ಷ ಕೋಟಿ ಸೇರಿ 2.44 ಲಕ್ಷ ಕೋಟಿ ರೂಪಾಯಿ ಆದಾಯವನ್ನು ಸರ್ಕಾರಗಳು ಪಡೆದಿವೆ.

ಲಾಕ್​ಡೌನ್​ ಅವಧಿಯಲ್ಲಿ ವ್ಯಾಪಾರ ಮತ್ತು ಕೈಗಾರಿಕೆಗಳು ಪ್ರಸ್ತುತ ಎದುರಿಸುತ್ತಿರುವ ಕಷ್ಟವನ್ನು ಗಮನದಲ್ಲಿಟ್ಟುಕೊಂಡು, ವ್ಯಾಪಾರ ಮತ್ತು ಕೈಗಾರಿಕೆಗಳಿಂದ ಗಳಿಸಲ್ಪಟ್ಟ ಆದಾಯದ ಕನಿಷ್ಠ ಶೇ.10 ನಷ್ಟು ಹಣವನ್ನು ಅಂದರೆ 20 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಬೇಕು. ಎಂದು ಮನವಿ ಮಾಡಿದ್ದಾರೆ.

ಲಾಕ್​ಡೌನ್​ ನಿಯಮಾವಳಿ ಪಾಲಿಸಿರುವುದರಿಂದ ವ್ಯಾಪಾರೋದ್ಯಮಕ್ಕೆ ಸುಮಾರು 75 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಸರ್ಕಾರ ಕಷ್ಟದಲ್ಲಿರುವ ಉದ್ಯಮ ಹಾಗೂ ವ್ಯಾಪಾರಿಗಳಿಗೆ ಸೂಕ್ತ ನೆರವು ನೀಡಬೇಕು ಎಂದು 50ಕ್ಕೂ ಹೆಚ್ಚು ಮನವಿ ಸಲ್ಲಿಸಿದ್ದೇವೆ. ಅವುಗಳಲ್ಲಿ ಕೆಲವನ್ನು ಸರ್ಕಾರ ಪರಿಗಣಿಸಿದೆ. ಆಸ್ತಿ, ವಾಣಿಜ್ಯ ತೆರಿಗೆ ಪಾವತಿ ಅವಧಿಯನ್ನು ರಾಜ್ಯ ಸರ್ಕಾರ ಜೂನ್ 30ರವರೆಗೆ ವಿಸ್ತರಿಸಿದೆ.

ವಿದ್ಯುತ್ ಬಿಲ್ ಪಾವತಿಯಲ್ಲಿ ರಿಯಾಯಿತಿ ನೀಡಿದೆ. ಎಪಿಎಂಸಿ ವಹಿವಾಟುಗಳ ಅವಧಿಯನ್ನು ವಿಸ್ತರಣೆ ಮಾಡಿದೆ. ಕೇಂದ್ರ ಸರ್ಕಾರ ಆದಾಯ ತೆರಿಗೆ ಹಾಗೂ ಜಿಎಸ್​ಟಿ ಪಾವತಿ ಅವಧಿಯನ್ನು ವಿಸ್ತರಣೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ವಿದ್ಯುತ್ ದರವನ್ನು 30 ಪೈಸೆಗೆ ಹೆಚ್ಚಿಸಿರುವುದು ಸರಿಯಲ್ಲ, ಕೂಡಲೇ ದರ ಹೆಚ್ಚಳದ ಆದೇಶ ಹಿಂಪಡೆಯಬೇಕು. ಮುಂದಿನ 2-3 ವರ್ಷ ವಿದ್ಯುತ್ ದರ ಹೆಚ್ಚಳ ಮಾಡಬಾರದು ಎಂದು ಎಫ್​ಕೆಸಿಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಸರ್ಕಾವನ್ನು ಒತ್ತಾಯಿಸಿದ್ದಾರೆ.

ಓದಿ:ಆರೋಗ್ಯ ಇಲಾಖೆ ಎಡವಟ್ಟು: 15 ನಿಮಿಷದಲ್ಲೇ ಎರಡು ವ್ಯಾಕ್ಸಿನ್​ ಪಡೆದ ಮಹಿಳೆ

ABOUT THE AUTHOR

...view details