ಬೆಂಗಳೂರು:ಮೆಟ್ರೋ ಕಾಮಗಾರಿಯಿಂದ 30 ಅಡಿ ಮಣ್ಣು ಕುಸಿದು ಭಾರಿ ಅನಾಹುತ ಸಂಭವಿಸುವುದು ಸ್ವಲ್ಪದರಲ್ಲೇ ತಪ್ಪಿದೆ. ನಗರದ ಟ್ಯಾನರಿ ರಸ್ತೆಯಲ್ಲಿ ಮುಚ್ಚಿದ್ದ ಬಾವಿಯ ಮಣ್ಣು ಕುಸಿದು ಸಂಸ್ಥೆ ಅಪಾಯ ತಂದಿಟ್ಟಿದೆ ಎಂದು ಜನತೆ ದೂರುತ್ತಿದ್ದಾರೆ.
ಇತ್ತೀಚೆಗಷ್ಟೇ ಹೊರ ಬಂದ ಟನಲ್ ಬೋರಿಂಗ್ ಮಷಿನ್:
ರಾಜಧಾನಿಯ ಗೊಟ್ಟಿಗೆರೆಯಿಂದ ನಾಗವಾರದವರೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಲ್ಲಿ ದುರಂತ ನಡೆದಿದೆ. ಇತ್ತೀಚೆಗಷ್ಟೆ ಸುರಂಗ ಕೊರೆದು ಊರ್ಜಾ (ಟನಲ್ ಬೋರಿಂಗ್ ಮಷಿನ್) ಹೊರ ಬಂದಿತ್ತು. ಟನಲ್ ಪ್ರೆಶರ್ಗೆ ಮಣ್ಣು ಕುಸಿದು ಭಾರಿ ಸಮಸ್ಯೆ ಉಂಟಾಗಿದೆ. ಮುಂಜಾನೆ 3 ಗಂಟೆಯಲ್ಲಿ ಮುಚ್ಚಿದ್ದ ಬಾವಿಯ ಮಣ್ಣು ಕುಸಿದು ಕೆಳಗೆ ಬಿದ್ದಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.