ಬೆಂಗಳೂರು: ಡ್ರೋನ್ ತಯಾರಿಸಿ ಹಲವು ದೇಶಗಳನ್ನು ಸುತ್ತಾಡಿ ಅನೇಕ ಬಹುಮಾನ ಪಡೆದಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾನೆಂಬ ಆರೋಪ ಹೊತ್ತಿರುವ ಡ್ರೋನ್ ಪ್ರತಾಪ್ಗಾಗಿ ಬೆಂಗಳೂರಿನ ಮೂರು ಪೊಲೀಸರ ತಂಡ ಶೋಧ ನಡೆಸುತ್ತಿದೆ.
ಕ್ವಾರಂಟೈನ್ ನಿಯಮ ಉಲ್ಲಂಘನೆ: ಡ್ರೋನ್ ಪ್ರತಾಪ್ ಬಂಧನಕ್ಕೆ ಮೂರು ತಂಡ ರಚನೆ - Bengaluru
ಡ್ರೋನ್ ಪ್ರತಾಪ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದಾನೆ ಎಂದು ಬೆಂಗಳೂರಿನ ಮೂರು ಪೊಲೀಸರ ತಂಡ ಶೋಧ ನಡೆಸುತ್ತಿದೆ.

ಇದೇ 15ರಂದು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದ ಪ್ರತಾಪ್ ತಲಘಟ್ಟಪುರ ಪೋಲಿಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದನಂತೆ. ಹೈದರಾಬಾದ್ನಿಂದ ಬಂದ ಕಾರಣ ಆತನನ್ನು ಬಿಬಿಎಂಪಿ 14 ದಿನ ಹೋಂ ಕ್ವಾರಂಟೈನ್ ಇರುವಂತೆ ಸೂಚಿಸಿತ್ತು. ಆದರೆ ಕ್ವಾರಂಟೈನ್ ಮರು ದಿನವೇ ನಿಯಮ ಉಲ್ಲಂಘನೆ ಮಾಡಿ ಹೊರಗಡೆ ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ನಿನ್ನೆ ತಲಘಟ್ಟಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹಾಗೆಯೇ ಪ್ರತಾಪ್ ಬಹುತೇಕ ಶಾಲಾ-ಕಾಲೇಜುಗಳ ಬಳಿ ತೆರಳಿ ತಪ್ಪು ಸಂದೇಶ ರವಾನೆ ಮಾಡಿದ್ದಾನೆಂದು ನಗರ ಆಯುಕ್ತ ಭಾಸ್ಕರ್ ರಾವ್ ಅವರಿಗೆ ದೂರು ನೀಡಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಪ್ರತಾಪ್ ನಾಪತ್ತೆಯಾಗಿದ್ದಾನೆ. ನಿನ್ನೆಯಿಂದ ಮೊಬೈಲ್ ಸ್ವಿಚ್ ಆಫ್ ಆಗಿದೆ. ಸದ್ಯ ತಲಘಟ್ಟಪುರ ಪೊಲೀಸರು, ಸಿಸಿಬಿ ಸ್ಕ್ವಾಡ್, ಬಿಬಿಎಂಪಿ ಮಂಡ್ಯ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಶೋಧ ಮುಂದುವರೆಸಿದ್ದಾರೆ. ಸದ್ಯ ಪ್ರತಾಪ್ ತಂದೆ-ತಾಯಿಯಿಂದ ಕೂಡ ಪೊಲೀಸರು ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.