ಬೆಂಗಳೂರು:ನಗರದಲ್ಲಿ ಮಹಾಮಾರಿಕೊರೊನಾದ ಅಟ್ಟಹಾಸ ದಿನದಿಂದ ದಿನಕ್ಕೆ ಗಣನೀಯವಾಗಿ ಮುಂದುವರೆದಿದ್ದು, ಇಂದು ಮತ್ತೆ ಮೂವರು ಬಲಿಯಾಗಿದ್ದಾರೆ.
ಪ್ರಕರಣ-1:
ಸೋಂಕಿತ 85 ವರ್ಷದ ವೃದ್ಧೆಯನ್ನು ಸೆಂಟ್ ಮಾರ್ಥಾಸ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಜೂನ್ 13 ರಂದು ಶಿಫ್ಟ್ ಮಾಡಲಾಗಿತ್ತು. ಇವತ್ತು ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪ್ರಕರಣ-2:
65 ವರ್ಷದ ಸೋಂಕಿತ ಮಹಿಳೆಯನ್ನು ಇಎಸ್‌ಐ ಆಸ್ಪತ್ರೆಯಿಂದ ಜೂನ್ 13 ರಂದು ವಿಕ್ಟೋರಿಯಾಗೆ ರವಾನಿಸಲಾಗಿತ್ತು. ಅವರೂ ಕೂಡ ಇಂದು ಕೊನೆಯುಸಿರೆಳೆದಿದ್ದಾರೆ.
ಪ್ರಕರಣ-3:
39 ವರ್ಷದ ವ್ಯಕ್ತಿಯನ್ನು ಜಯನಗರ ಸರ್ಕಾರಿ ಆಸ್ಪತ್ರೆಯಿಂದ ವರ್ಗಾಯಿಸಿ ವಿಕ್ಟೋರಿಯದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರೂ ಕೂಡಾ ಇವತ್ತು ಮಾರಣಾಂತಿಕ ಖಾಯಿಲೆಯ ಜೊತೆ ಹೋರಾಡಿ ಸಾವಿನ ಕದ ತಟ್ಟಿದ್ದಾರೆ.
ಆರೋಗ್ಯಾಧಿಕಾರಿಗಳು ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುತ್ತಿದ್ದು, ಸೋಂಕಿನ ಮೂಲ ತಿಳಿಯಬೇಕಿದೆ.
ಬೆಂಗಳೂರಿಗೆ ಸೂಪರ್ ಸ್ಪ್ರೆಡರ್ ಚಿಕ್ಕಪೇಟೆ ವೈದ್ಯ?
ಜಯನಗರ ನಿವಾಸಿಯಾಗಿರುವ ವೈದ್ಯರೊಬ್ಬರು ಚಿಕ್ಕಪೇಟೆಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದರು. ಇವರು ಕೆಲ ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ನೀಡಿರುವ ಕಾರಣ ಅವರಿಂದ ಕೊರೊನಾ ಹರಡಿರುವ ಶಂಕೆ ವ್ಯಕ್ತವಾಗಿದೆ. ಬಿಬಿಎಂಪಿ ಆರೋಗ್ಯಾಧಿಕಾರಿಗಳು ಇವರ ಸಂಪರ್ಕ ಪತ್ತೆ ಹಚ್ಚುತ್ತಿದ್ದಾರೆ.
ಇದರ ನಡುವೆ ಬೆಂಗಳೂರಿಗೆ ಸೂಪರ್ ಸ್ಪ್ರೆಡರ್ ಆಗ್ತಾರಾ ಚಿಕ್ಕಪೇಟೆ ವೈದ್ಯ ಎಂಬ ಆತಂಕ ಎಲ್ಲೆಡೆ ಸೃಷ್ಟಿಯಾಗಿದೆ. 15ಕ್ಕೂ ಹೆಚ್ಚು ಜನರು ಹಾಗೂ ರೋಗಿಗಳು ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಪ್ರಾಥಮಿಕ ಸಂಪರ್ಕ 5, ದ್ವಿತೀಯ ಸಂಪರ್ಕದಲ್ಲಿ 15 ಕ್ಕೂ ಹೆಚ್ಚು ಜನರು ಇರುವುದಾಗಿ ತಿಳಿದುಬಂದಿದ್ದು, ಈಗಾಗಲೇ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.