ಆನೇಕಲ್: ನಗರದಲ್ಲಿ ಇತ್ತೀಚೆಗೆ ಭಾರೀ ಅಪಘಾತ ಸಂಭವಿಸುತ್ತಿವೆ.ಈ ಮೊದಲು ಕೋರಮಂಗಲದಲ್ಲಿ ಕಾರು ಅಪಘಾತಕ್ಕೆ 7 ಜನ ಬಲಿಯಾಗಿದ್ದರು. ಮೊನ್ನೆ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ಇಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೇಲ್ಸೇತುವೆಯಿಂದ ಕೆಳಕ್ಕೆ ಹಾರಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಆ್ಯಂಬುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದು ಮೂವರು ಸಾವಿಗೀಡಾಗಿದ್ದಾರೆ.
ಆನೇಕಲ್ ತಾಲೂಕಿನ ಚಂದಾಪುರ-ಅತ್ತಿಬೆಲೆ ಹೆದ್ದಾರಿ 7ರ ನೆರಳೂರು ಬಳಿ ಗುರುವಾರ ಮುಂಜಾನೆ ಈ ದುರಂತ ನಡೆದಿದೆ. ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಚಾಲಕ ಮುಂಜಾನೆಯ ನಿದ್ದೆ ಮಂಪರಿನಲ್ಲಿ ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕುವ ಭರಾಟೆಯಲ್ಲಿ ಡಿಕ್ಕಿ ಹೊಡೆದಿದ್ದರಿಂದ ರೋಗಿ ಸೇರಿ ಮೂವರು ಸಾವಿಗೀಡಾಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.ಆ್ಯಂಬುಲೆನ್ಸ್ ಸಹ ಚಾಲಕ ಸೇರಿದಂತೆ ರೋಗಿ ಹಾಗೂ ವೈದ್ಯ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿಯಾಗಿ 3 ಸಾವು, ಇಬ್ಬರಿಗೆ ಗಾಯ ಸತ್ತವರ್ಯಾರು?
ಮಹಾರಾಷ್ಟ್ರದ ನಾಸಿಕ್ ಮೂಲದ ವೈದ್ಯ ಡಾ ಜಾದವ್ ಅಶೋಕ್, ಚೆನ್ನೈ ಮೂಲದ ರೋಗಿ ಅನ್ವರ್ ಖಾನ್(68) ಮತ್ತು ಸಹ ಚಾಲಕ ತುಕಾರಾಮ್ ಬಬಿಯಾ ಸಾವಿಗೀಡಾಡವರು. ಇನ್ನು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡಿಗೆ ಹೋಗುತ್ತಿದ್ದವರು ಮಸಣದೆಡೆಗೆ:
ಮಹಾರಾಷ್ಟ್ರದ ಮುಂಬೈನ ಕಲ್ಯಾಣದಿಂದ ತಮಿಳುನಾಡಿನ ಕಡಲೂರಿಗೆ ಪ್ಯಾರಲೈಸಿಸ್ ರೋಗಿ ಅನ್ವರ್ ಖಾನ್ ನನ್ನು ಚಿಕಿತ್ಸೆಗಾಗಿ ವೈದ್ಯರೊಂದಿಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಇದಾಗಿತ್ತು. ಘಟನೆ ಹಿನ್ನೆಲೆ ಹೆದ್ದಾರಿ ಸಂಚಾರಕ್ಕೆ ಕೆಲ ಕಾಲ ಅಡ್ಡಿಯುಂಟಾಯಿತು. ಅತ್ತಿಬೆಲೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆ್ಯಂಬುಲೆನ್ಸ್ ಡಿಕ್ಕಿಯಾಗಿ 3 ಸಾವು, ಇಬ್ಬರಿಗೆ ಗಾಯ ಹೈವೇ ಆಕ್ಸಿಡೆಂಟ್ ಆಪ್:
ಹೆದ್ದಾರಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿ ಆರ್ಟಿಒ, ಪೊಲೀಸ್ ಅಧಿಕಾರಿಗಳ ಸಮಿತಿ ಪರಿಶೀಲನೆ ನಡೆಸುತ್ತಿದೆ. ಈಗಾಗಲೇ ದೇಶದಲ್ಲಿ ಇಂಟಿಗ್ರೇಟೆಡ್ ಹೈವೇ ಆಕ್ಸಿಡೆಂಟ್ ಆಪ್ನ್ನು ಅಭಿವೃದ್ಧಿಗೊಳಿಸಿದೆ. ಎಲ್ಲಿಯೇ ರಸ್ತೆ ಅಪಘಾತಗಳಾದರೂ ಡೆಟಾ ಬೇಸಿಸ್ ಮೂಲಕ ದತ್ತಾಂಶ ಸಂಗ್ರಹಿಸಿ ಅಪಘಾತ ತಡೆಯುವ ಕ್ರಮಗಳು ಮತ್ತು ಅವುಗಳನ್ನು ನಿಯಂತ್ರಿಸುವ ಕ್ರಮಗಳ ಕುರಿತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಎಲ್ಲ ರೀತಿಯ ಕ್ರಮಗಳನ್ನು ಶೀಘ್ರವೇ ಕೂಲಂಕಷವಾಗಿ ಅಧ್ಯಯನ ನಡೆಸುತ್ತಿದ್ದೇವೆ ಎಂದು ಎಸ್ಪಿ ವಂಶಿ ಕೃಷ್ಣ ಮಾಹಿತಿ ನೀಡಿದ್ದಾರೆ.
ಪ್ರತಿ ಬಾರಿ ಇಂತಹ ಅಪಘಾತಗಳಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನುಣುಚಿಕೊಳ್ಳುವ ರೀತಿ ಕುರಿತು ಜಿಲ್ಲಾಧಿಕಾರಿ ಹಾಗು ಜಿಲ್ಲಾ ವರಿಷ್ಠಾಧಿಕಾರಿಗಳ ಸಮಿತಿಯಲ್ಲಿ ಈ ಕುರಿತು ಮಾಹಿತಿ ಮಂಡಿಸಿ ಕ್ರಮಕ್ಕೆ ಆಗ್ರಹಿಸುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಸ್ಥಳಕ್ಕೆ ಕೇಂದ್ರವಲಯ ಐಜಿಪಿ ಚಂದ್ರಶೇಖರ್, ಎಸ್ಪಿ ವಂಶಿ ಕೃಷ್ಣ, ಎಎಸ್ಪಿ ಲಕ್ಷ್ಮಿ ಗಣೇಶ್ ಮತ್ತು ಡಿವೈಎಸ್ಪಿ ಮಲ್ಲೇಶ್ ಹಾಜರಿದ್ದರು.