ಕರ್ನಾಟಕ

karnataka

ETV Bharat / state

ಸಾಂತ್ವನ ಕೇಂದ್ರದಲ್ಲಿ ರಾಗಿಣಿ: ಮಧ್ಯರಾತ್ರಿ ಮಗಳನ್ನು ನೋಡಲು ಬಂದ ಪೋಷಕರು - ರಾಗಿಣಿ ಲೆಟೆಸ್ಟ್ ನ್ಯೂಸ್

ನಟಿ ರಾಗಿಣಿ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಯಲ್ಲಿದ್ದು, ತುಪ್ಪದ ಬೆಡಗಿ‌ಗೆ ‌ಇಂದಿನಿಂದ ಅಸಲಿ ತನಿಖೆ ಶುರುವಾಗಲಿದೆ. ರಾತ್ರಿ ಮಹಿಳಾ ಆರೋಪಿಯನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದ ಕಾರಣ ಅರೆಸ್ಟ್ ಮಾಡಿ ಬೆಂಗಳೂರಿನ ಡೈರಿ ವೃತ್ತ ಬಳಿಯಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು.

3 days invesigation for Ragini
ಸಾಂತ್ವಾನ ಕೇಂದ್ರದಲ್ಲಿ ರಾಗಿಣಿ; ಮಧ್ಯರಾತ್ರಿಯಲ್ಲಿ ಮಗಳನ್ನು ನೋಡಲು ಬಂದ ಪೋಷಕರು

By

Published : Sep 5, 2020, 7:17 AM IST

ಬೆಂಗಳೂರು:ಸ್ಯಾಂಡಲ್​​ವುಡ್ ಡ್ರಗ್ಸ್​​ ಪ್ರಕರಣ ಸಂಬಂಧ ನಟಿ ರಾಗಿಣಿ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಯಲ್ಲಿದ್ದು, ತುಪ್ಪದ ಬೆಡಗಿ‌ಗೆ ‌ಇಂದಿನಿಂದ ಅಸಲಿ ತನಿಖೆ ಶುರುವಾಗಲಿದೆ. ರಾತ್ರಿ ಮಹಿಳಾ ಆರೋಪಿಯನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದ ಕಾರಣ ಅರೆಸ್ಟ್ ಮಾಡಿ ಬೆಂಗಳೂರಿನ ಡೈರಿ ವೃತ್ತದ ಬಳಿಯಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ನಟಿ ‌ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದು, ಮತ್ತಷ್ಟು ವಿಚಾರ ತಿಳಿದು ಬರಲಿದೆ.

ನಿನ್ನೆ ರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮೂರು ಜನರು ಇರಬಹುದಾದ ಕೋಣೆಯಲ್ಲಿ ರಾಗಿಣಿ ಇದ್ದರು. ಯಾವುದೇ ವಿಐಪಿ ಟ್ರೀಟ್ಮೆಂಟ್ ಕೊಡದೆ ಸಾಮಾನ್ಯ ಆರೋಪಿಗಳ ರೀತಿಯಲ್ಲಿ ರೂಮ್ ಕೊಡಲಾಗಿದೆ. ರಾಗಿಣಿ ಜೊತೆಗೆ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು ಭದ್ರತೆಗಾಗಿ ಇದ್ದು, ಕೋಣೆಯಲ್ಲಿ ಮಂಚ, ಫ್ಯಾನ್, ರೆಸ್ಟ್​​ ರೂಮ್ ವ್ಯವಸ್ಥೆ ಇದೆ. ತಡರಾತ್ರಿ 12:15ರ ಸುಮಾರಿಗೆ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು‌ ಅನ್ನ, ಸಾಂಬಾರ್, ಚಪಾತಿ, ಪಲ್ಯ, ಪಾಪಡ್ ಕೊಡಲಾಗಿದೆ.

ಮಧ್ಯರಾತ್ರಿ ಮಗಳಿಗಾಗಿ ಮಿಡಿದ ತಾಯಿಯ ಕರುಳು:ರಾಗಿಣಿ ದ್ವಿವೇದಿಯನ್ನು ಭೇಟಿ ಮಾಡಲು ಅವರ ತಾಯಿ ರೋಹಿಣಿ ದ್ವಿವೇದಿ, ತಂದೆ ರಾಕೇಶ್ ದ್ವಿವೇದಿ ಮಧ್ಯರಾತ್ರಿ ದೌಡಾಯಿಸಿದ್ದರು. ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದು ಗೇಟ್​ ಬಳಿ ಕಾದು ಊಟಕ್ಕಾಗಿ ಪಾಸ್ತಾ, ನೀರಿನ ಬಾಟಲ್ ಹಾಗೂ ಬಟ್ಟೆ ತಂದಿದ್ದರು. ನಂತರ ಪೊಲೀಸರು ತೆರಳುವಂತೆ ಸೂಚನೆ ನೀಡಿದ ಕಾರಣ ಕೊನೆಗೆ ಊಟ, ಬಟ್ಟೆ ವಾಪಸ್ ತೆಗೆದುಕೊಂಡು ಮನೆಗೆ ಹೊರಟಿದ್ದಾರೆ. ಸದ್ಯ ಸಾಂತ್ವನ ಕೇಂದ್ರದ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಇದೆ. ಇಂದು‌ ಸಿಸಿಬಿ‌ ಕಚೇರಿಯಲ್ಲಿ ಹಿರಿಯಾಧಿಕಾರಿಯಾದ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ, ಮಹಿಳಾಧಿಕಾರಿ ‌ನೇತೃತ್ವದಲ್ಲಿ ತನಿಖೆ ನಡೆಯಲಿದೆ.

ABOUT THE AUTHOR

...view details