ಬೆಂಗಳೂರು: ನಿಷೇಧಿಸಲ್ಪಟ್ಟಿರುವ ಐದು ನೂರು ರೂಪಾಯಿ ಮುಖಬೆಲೆಯ ಹಳೇ ನೋಟುಗಳ ಚಲಾವಣೆಗೆ ಬಂದಿದ್ದ ಮೂವರು ಆರೋಪಿಗಳನ್ನ ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಯೋಗಾನಂದ, ವೆಂಕಟರಮಣ ಹಾಗೂ ಹರಿಪ್ರಸಾದ್ ಬಂಧಿತರು.
ನಿಷೇಧಿತ ನೋಟುಗಳ ಚಲಾವಣೆಗೆ ಯತ್ನ: ಮೂವರ ಬಂಧನ - ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್
ನಿಷೇಧಿತ ನೋಟುಗಳ ಚಲಾವಣೆಗೆ ಯತ್ನ - ಮೂವರು ಆರೋಪಿಗಳನ್ನು ಬಂಧಿಸಿದ ಬನಶಂಕರಿ ಠಾಣೆ ಪೊಲೀಸರು - ಬಂಧಿತರಿಂದ 500 ರೂ. ಮುಖ ಬೆಲೆಯ 88 ಲಕ್ಷ ಹಳೇ ನೋಟುಗಳು ವಶಕ್ಕೆ
ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಕದಿರೇನಹಳ್ಳಿ ಮೇಲ್ಸೇತುವೆ ಬಳಿ ಹಣದ ಸಮೇತ ಕಾಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬನಶಂಕರಿ ಠಾಣೆ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದು 500 ಮುಖ ಬೆಲೆಯ 88 ಲಕ್ಷ ಹಳೇ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ನಿಷೇಧಿತ ನೋಟುಗಳು ಆರೋಪಿಗಳಿಗೆ ಸಿಕ್ಕಿರುವುದು ಹೇಗೆ? ಮತ್ತು ಯಾರೊಂದಿಗೆ ವ್ಯವಹಾರ ನಡೆಸಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ:ಆರ್ಬಿಐ ಅಧಿಕಾರಿಗಳ ಸೋಗಿನಲ್ಲಿ ಹಳೇ ನೋಟು ಎಕ್ಸ್ಚೇಂಜ್ ದಂಧೆ: ನಾಲ್ವರ ಬಂಧನ