ಕರ್ನಾಟಕ

karnataka

ETV Bharat / state

ತಲೆಮರೆಸಿಕೊಂಡ ಡ್ರಗ್ಸ್​​ ಪ್ರಕರಣದ ಮೂವರು ಆರೋಪಿಗಳು: ಬಲೆ ಬೀಸಿದ ಸಿಸಿಬಿ - ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ನಂಟು ಆರೋಪ ಪ್ರಕರಣ

ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಆಪ್ತ ಶೇಖ್ ಫಾಜಿಲ್, ಆದಿತ್ಯಾ ಆಳ್ವ, ನಟಿ ರಾಗಿಣಿ-ಐದ್ರಿಂತಾರ ಸ್ನೇಹಿತ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಸದ್ಯ ತಲೆ ಮರೆಸಿಕೊಂಡಿದ್ದು, ಸಿಸಿಬಿ ಶೋಧ ಕಾರ್ಯ ಕೈಗೊಂಡಿದೆ.

3 accused of sandalwood drugs case are escaped
ತಲೆಮರೆಸಿಕೊಂಡ ಡ್ರಗ್ಸ್​​ ಪ್ರಕರಣದ ಮೂವರು ಆರೋಪಿಗಳು; ಸಿಸಿಬಿ ಶೋಧ ಕಾರ್ಯ ಚುರುಕು

By

Published : Sep 24, 2020, 7:28 AM IST

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್ ಪೇಟೆ ಠಾಣೆಯಲ್ಲಿ ದಾಖಲಾದ (ಎಫ್ಐಆರ್) ಕೇಸ್​​ನ ಪ್ರಮುಖ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಸಿಸಿಬಿ ತನಿಖಾಧಿಕಾರಿಗಳಿಗೆ ಅವರನ್ನು ಪತ್ತೆಹಚ್ಚುವ ಸವಾಲು ಎದುರಾಗಿದೆ.

ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಆಪ್ತ ಶೇಖ್ ಫಾಜಿಲ್, ಆದಿತ್ಯಾ ಆಳ್ವ, ನಟಿ ರಾಗಿಣಿ-ಐದ್ರಿಂತಾರ ಸ್ನೇಹಿತ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಸದ್ಯ ತಲೆ ಮರೆಸಿಕೊಂಡಿದ್ದಾರೆ. ಈ ಮೂವರು ಪ್ರಬಲ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ರೆ ಪ್ರಕರಣದ ಪ್ರಮುಖ ವಿಚಾರ ತಿಳಿದು ಬರಲಿದೆ. ಜೊತೆಗೆ ಹಲವಾರು ನಟ-ನಟಿಯರು, ರಾಜಾಕಾರಣಿಗಳ ಭವಿಷ್ಯ ನಿರ್ಧಾರವಾಗಲಿದೆ.

ಹೀಗಾಗಿ ಸಿಸಿಬಿಯ ಹಿರಿಯಾಧಿಕಾರಿಗಳು ಆರೋಪಿಗಳ ಪತ್ತೆಗೆ ಎಸಿಪಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದಾರೆ. ಈ ತಂಡದಲ್ಲಿ 12 ಇನ್ಸ್​​​ಪೆಕ್ಟರ್​​​ಗಳು ಇದ್ದು, ಆರೋಪಿಗಳ ಕುಟುಂಬಸ್ಥರು, ಸ್ನೇಹಿತರ ಚಲನವಲನದ ಮೇಲೆ‌ ನಿಗಾ ಇಟ್ಟಿದ್ದಾರೆ. ಬೆಂಗಳೂರು ಬಿಟ್ಟು ಹೊರ ಹೋಗಿರುವ ಗುಮಾನಿಯಿದ್ದು, ಒಂದು ತಂಡ ಹೊರಗಡೆ ತೆರಳಿ ಅಲ್ಲಿ ‌ಕೂಡ ಶೋಧ ಮುಂದುವರೆಸಿದೆ. ಅಷ್ಟು ‌ಮಾತ್ರವಲ್ಲದೆ ದೇಶ ಬಿಟ್ಟು ತೆರಳದಂತೆ ಲುಕ್ಔಟ್ ನೋಟಿಸ್ ಕೂಡ ಜಾರಿ‌ ಮಾಡಲಾಗಿದೆ.

ಈ ಮೂವರು ಸಿಕ್ಕಿಬಿದ್ದರೆ ಹಲವು ಪ್ರಭಾವಿಗಳ ಮುಖವಾಡ ಬಯಲಾಗಲಿದೆ. ತಲೆಮರೆಸಿಕೊಂಡಿರುವ ಆರೋಪಿಗಳು ನಶೆ ಲೋಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಲವಾರು ಮಂದಿಗೆ ಡ್ರಗ್ಸ್​ ಪೂರೈಕೆ ಹಾಗೂ ಸೇವನೆ ಮಾಡಲು ಪ್ರಚೋದನೆ‌ ಮಾಡಿರುವ ಆರೋಪ ಇವರ ಮೇಲಿದೆ. ಸದ್ಯ ಸಿಸಿಬಿ ‌ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ABOUT THE AUTHOR

...view details