ಬೆಂಗಳೂರು:ರಾಜಧಾನಿಯಲ್ಲಿ ಮಾದಕವಸ್ತುಗಳ ಕಬಂಧಬಾಹು ವಿಸ್ತರಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ನಗರ ಪೊಲೀಸರು ಪಣ ತೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ದಂದೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಹುಳಿಮಾವು ಪೊಲೀಸರು ಬಂಧಿಸಿ 7 ಕೋಟಿ ರೂಪಾಯಿ ಮೌಲ್ಯದ 13 ಕೆ.ಜಿ ಹ್ಯಾಶ್ ಆಯಿಲ್ ಜಪ್ತಿ ಮಾಡಿಕೊಂಡಿದ್ದಾರೆ.
ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯಶ್ವೇರ ರಾವ್ ಮಾತನಾಡಿದ್ದಾರೆ ಬೆಂಗಳೂರಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹ್ಯಾಶ್ ಆಯಿಲ್ ಜಪ್ತಿ ಮಾಡಿಕೊಂಡ ಮೊದಲ ಪ್ರಕರಣ ಇದು ಎನ್ನಲಾಗುತ್ತಿದೆ. ಇತ್ತೀಚೆಗೆ ಡ್ರಗ್ಸ್ ದಂಧೆ ಮಾಡುತ್ತಿರುವ ಬಗ್ಗೆ ಇಬ್ಬರನ್ನು ಹುಳಿಮಾವು ಪೊಲೀಸರು ಬಂಧಿಸಿದ್ದರು.
ಇವರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಆರೋಪಿಗಳಾದ ವಿಶ್ವಂ, ಸಿಗಿಲ್ ಹಾಗೂ ಯುವತಿ ವಿಷ್ಣುಪ್ರಿಯ ಎಂಬುವರನ್ನು ಬಂಧಿಸಲಾಗಿದೆ. ಆಂಧ್ರದ ವಿಶಾಖಪಟ್ಟಣದಿಂದ ಹ್ಯಾಷ್ ಆಯಿಲ್ ತರಿಸಿಕೊಂಡು ಗ್ರಾಂ ಲೆಕ್ಕದಲ್ಲಿ ನಗರದಲ್ಲಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯಶ್ವೇರ ರಾವ್ ತಿಳಿಸಿದ್ದಾರೆ.
ಇದನ್ನೂ ಓದಿ:ಉಕ್ರೇನ್: ಮಂಗಳೂರಿಗೆ ನಾಲ್ವರು ವಿದ್ಯಾರ್ಥಿಗಳ ಆಗಮನ; ಪೋಷಕರ ನಿಟ್ಟುಸಿರು