ಕರ್ನಾಟಕ

karnataka

ETV Bharat / state

ರಾಮನಗರದ 68 ಸಿಬ್ಬಂದಿಯ 2ನೇ ಟೆಸ್ಟ್ ಕೂಡ ನೆಗೆಟಿವ್: ಡಿಸಿಎಂ ಅಶ್ವತ್ಥ್​ ನಾರಾಯಣ - ರಾಮನಗರದ 68 ಸಿಬ್ಬಂದಿಗಳ 2ನೇ ಟೆಸ್ಟ್ ನೆಗೆಟಿವ್

ಪಾದರಾಯನಪುರ ಗಲಭೆಯ ಆರೋಪಿಗಳು ರಾಮನಗರದ ಜಿಲ್ಲಾ ಕಾರಾಗೃಹದಲ್ಲಿದ್ದ ವೇಳೆ ಅವರ ಮೇಲೆ ನಿಗಾ ವಹಿಸಿದ್ದ ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿ ಒಟ್ಟು 68 ಮಂದಿಯ ಎರಡನೇ ಬಾರಿಯ ಕೊರೊನಾ ತಪಾಸಣಾ ಫಲಿತಾಂಶ ನೆಗೆಟಿವ್ ಬಂದಿದೆ.

DCM Ashwathth  narayana
ಡಿಸಿಎಂ ಅಶ್ವತ್ಥನಾರಾಯಣ

By

Published : May 6, 2020, 10:27 PM IST

ಬೆಂಗಳೂರು: ಸರ್ಕಾರ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಂದ ಜಿಲ್ಲೆ ಈಗಲೂ ಗ್ರೀನ್‌ ಝೋನ್‌ ಆಗಿ ಉಳಿದಿದೆ ಎಂಬ ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳಲು ಖುಷಿ ಆಗುತ್ತಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್​ ನಾರಾಯಣ ತಿಳಿಸಿದ್ದಾರೆ.


ಪಾದರಾಯನಪುರದ ಆರೋಪಿಗಳ ನೇರ ಸಂಪರ್ಕಕ್ಕೆ ಬಂದಿದ್ದ ರಾಮನಗರದ ಜೈಲು ಸಿಬ್ಬಂದಿ, ಪೊಲೀಸರು, ಅಧಿಕಾರಿಗಳು, ನಗರಸಭೆ ಸಿಬ್ಬಂದಿ, ಚಾಲಕರು ಸೇರಿದಂತೆ ಒಟ್ಟು ಸಂಪರ್ಕಕ್ಕೆ ಬಂದಿದ್ದ ಎಲ್ಲಾ 68 ಮಂದಿಯನ್ನು ಎರಡನೇ ಬಾರಿಗೆ ತಪಾಸಣೆಗೆ ಒಳಪಡಿಸಲಾಗಿತ್ತು. ಎಲ್ಲರದ್ದೂ ನೆಗೆಟಿವ್ ಫಲಿತಾಂಶ ಬಂದಿರುವುದು ನನಗೆ ತುಂಬಾ ಸಮಾಧಾನ ತಂದಿದೆ ಎಂದು ಡಿಸಿಎಂ ತಿಳಿದ್ದಾರೆ.


ರಾಮನಗರ ಜಿಲ್ಲಾ ಕಾರಾಗೃಹದಲ್ಲಿರಿಸಿದ್ದ ಆರೋಪಿಗಳಲ್ಲಿ ಐವರಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಜೈಲನ್ನೇ ಸೀಲ್‌ಡೌನ್ ಮಾಡಿ 100 ಮೀಟರ್‌ ಪ್ರದೇಶವನ್ನು ಕಂಟೈನ್​ಮೆಂಟ್​ ‌ ಝೋನ್‌ ಎಂದು ಘೋಷಿಸಿ ಎಚ್ಚರ ವಹಿಸಲಾಗಿತ್ತು.

ABOUT THE AUTHOR

...view details