ಕರ್ನಾಟಕ

karnataka

ETV Bharat / state

ದಯವಿಟ್ಟು ಗಮನಿಸಿ: ಭಾನುವಾರ ಟ್ರಿನಿಟಿ - ಹಲಸೂರು ಮಾರ್ಗದಲ್ಲಿ 2 ಗಂಟೆ ಮೆಟ್ರೋ ಸೇವೆ ಸ್ಥಗಿತ - Metro

ಭಾನುವಾರ ನೇರಳೆ ಮಾರ್ಗದಲ್ಲಿ ಕಾಮಗಾರಿ ಇರುವ ಕಾರಣ ಮೆಟ್ರೋ ಸೇವೆಯನ್ನು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಸೇವೆ 2 ಗಂಟೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.

2am Metro service breakdown on Trinity-Halsur  route on Sunday
ಭಾನುವಾರ ಟ್ರಿನಿಟಿ-ಹಲಸೂರು ಮಾರ್ಗದಲ್ಲಿ 2 ಗಂಟೆ ಮೆಟ್ರೋ ಸೇವೆ ಸ್ಥಗಿತ

By

Published : Feb 26, 2021, 7:49 PM IST

ಬೆಂಗಳೂರು: ಇದೇ ಭಾನುವಾರ 28ರಂದು ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.

ನೇರಳೆ ಮಾರ್ಗದ ಟ್ರಿನಿಟಿ ಮತ್ತು ಹಲಸೂರು ಮೆಟ್ರೋ ನಿಲ್ದಾಣಗಳ ನಡುವೆ ದುರಸ್ತಿ ಕಾಮಗಾರಿ ಕಾರಣ 2 ಗಂಟೆ ಕಾಲ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ಅವಧಿಯಲ್ಲಿ ಪ್ರಯಾಣಿಕರಿಗೆ ಎಂ.ಜಿ.ರಸ್ತೆ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಲಭ್ಯವಿರುತ್ತದೆ.

ಈ ದುರಸ್ತಿ ಕಾಮಗಾರಿಯು ಪೂರ್ಣಗೊಂಡ ನಂತರ ಎಂದಿನಂತೆ ಮೆಟ್ರೋ ಸೇವೆ ಮುಂದುವರಿಯಲಿದೆ. ಹಸಿರು ಮಾರ್ಗದಲ್ಲಿ ಎಂದಿನಂತೆ ಇರುತ್ತದೆ ಎಂದು ಬಿಎಂಆರ್​ಸಿಎಲ್​ ಮಾಹಿತಿ ನೀಡಿದೆ.

ABOUT THE AUTHOR

...view details