ಕರ್ನಾಟಕ

karnataka

ETV Bharat / state

ಇಂದು ಒಂದೇ ದಿನ 299 ಪಾಸಿಟಿವ್ ಕೇಸ್‌.. 221 ಮಂದಿ ಡಿಸ್ಚಾರ್ಜ್‌, ಇಬ್ಬರು ಬಲಿ..

ರಾಯಚೂರಿನಲ್ಲಿ ಒಂದೇ ದಿನ 83 ಕೇಸ್‌ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 217ಕ್ಕೆ ಏರಿದೆ. ಯಾದಗಿರಿ 44, ಬೀದರ್ 33, ವಿಜಯಪುರ26, ಕಲಬುರ್ಗಿ 28, ಬೆಂಗಳೂರು 21 ಅತೀ ಹೆಚ್ಚು ಪ್ರಕರಣ ಈ ಜಿಲ್ಲೆಗಳಲ್ಲಿ ಕಂಡು ಬಂದಿವೆ.

ಕೊರೊನಾ
ಕೊರೊನಾ

By

Published : May 31, 2020, 7:46 PM IST

ಬೆಂಗಳೂರು :ಮೇ ತಿಂಗಳ ಅಂತ್ಯದಲ್ಲಿ ಕೊರೊನಾ 3 ಸಾವಿರ ಗಡಿ ದಾಟಲಿದೆ ಅಂತಾ ಅಂದಾಜಿಸಲಾಗಿತ್ತು. ಅದರಂತೆ ಇಂದು 24 ಗಂಟೆಗಳಲ್ಲಿ ಬರೋಬ್ಬರಿ 299 ಹೊಸ ಕೇಸ್​ ಪತ್ತೆಯಾಗಿವೆ. ಇದರಿಂದಾಗಿ 3,221ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ. ಅಷ್ಟೇ ಅಲ್ಲ, ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ.‌

ರಾಯಚೂರು ಮತ್ತು‌ ಬೀದರ್​ನಲ್ಲಿ ತಲಾ‌ ಒಂದೊಂದು ಸಾವಿನ‌ ವರದಿಯಾಗಿದೆ. ಸೋಂಕಿಗೆ ಈವರೆಗೆ 51 ಮಂದಿ ಬಲಿಯಾದಂತಾಗಿದೆ. ಇಬ್ಬರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ಇಂದು ಬರೋಬ್ಬರಿ 221 ಜನ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 1,218 ಜನ ಗುಣಮಖರಾಗಿರೋದು ಒಂದಿಷ್ಟು ಖುಷಿಪಡುವ ಸಂಗತಿ. 1,950 ಸಕ್ರಿಯ ಪ್ರಕರಣಗಳು ಇದ್ದು, 15 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕಂಡು ಬಂದ ಹೊಸ ಪ್ರಕರಣಗಳಲ್ಲಿ 255 ಜನ ಹೊರ ರಾಜ್ಯದವರು. 7 ಅಂತರ್​​ರಾಷ್ಟ್ರೀಯ ಪ್ರಯಾಣಿಕರಿದ್ದಾರೆ.

ರಾಯಚೂರಿನಲ್ಲಿ ಒಂದೇ ದಿನ 83 ಕೇಸ್‌ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 217ಕ್ಕೆ ಏರಿದೆ. ಯಾದಗಿರಿ 44, ಬೀದರ್ 33, ವಿಜಯಪುರ26, ಕಲಬುರ್ಗಿ 28, ಬೆಂಗಳೂರು 21 ಅತೀ ಹೆಚ್ಚು ಪ್ರಕರಣ ಈ ಜಿಲ್ಲೆಗಳಲ್ಲಿ ಕಂಡು ಬಂದಿವೆ. ಪತ್ತೆಯಾದ ಪ್ರಕರಣಗಳಲ್ಲಿ ಮಹಾರಾಷ್ಟ್ರದ ಹಿನ್ನೆಲೆ ಹೊಂದಿರುವವರೇ ಹೆಚ್ಚಿದ್ದಾರೆ.

ಇತ್ತ ಬೆಂಗಳೂರಿನಲ್ಲಿ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಸಮಾಧಾನಕರ ಎನ್ನುವಂತೆ 59 ಮಂದಿ ಒಂದೇ ದಿನ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಈವರಗೆ 357 ಸೋಂಕಿತರಿದ್ದಾರೆ. ಅದರಲ್ಲಿ 231 ಜನ ಗುಣಮುಖರಾಗಿದ್ದಾರೆ. ಉಳಿದ 115 ಸಕ್ರಿಯ ಪ್ರಕರಣಗಳಷ್ಟೇ ಇರುವುದು. ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ಸ್ಯಾಂಪಲ್ಸ್ 3 ಲಕ್ಷ ಆಗಲಿದ್ದು, ಈಗಾಗಲೇ 2, 93, 575 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.

ABOUT THE AUTHOR

...view details