ಬೆಂಗಳೂರು:ರಾಜ್ಯದಲ್ಲಿಂದು 89,964 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 290 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,86,276ಕ್ಕೆ ಏರಿಕೆಯಾಗಿದೆ.
24 ಗಂಟೆಯಲ್ಲಿ 408 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು 29,39,647 ಸೋಂಕಿತರು ಗುಣಮುಖರಾಗಿದ್ದಾರೆ. ಕೋವಿಡ್ಗೆ ಇಂದು 10 ಮಂದಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 38,017ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 8,583 ಪ್ರಕರಣಗಳು ಸಕ್ರಿಯವಾಗಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.32 ರಷ್ಟಿದ್ದು, ಸಾವಿನ ಪ್ರಮಾಣ ಶೇ.3.44ಕ್ಕೆ ಏರಿದೆ.
ಇನ್ನು ರಾಜಧಾನಿ ಬೆಂಗಳೂರಲ್ಲಿ 137 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,50,844ಕ್ಕೆ ಏರಿಕೆಯಾಗಿದೆ. 206 ಜನರು ಗುಣಮುಖರಾಗಿದ್ದು, ಸುಮಾರು 12,28,172 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 6 ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,250 ಆಗಿದೆ. ಸದ್ಯ 6,421 ಪ್ರಕರಣಗಳು ಸಕ್ರಿಯವಾಗಿವೆ.
ರೂಪಾಂತರಿ ಅಪ್ಡೇಟ್
- ಅಲ್ಫಾ- 155
- ಬೇಟ- 08
- ಡೆಲ್ಟಾ- 1679
- ಡೆಲ್ಟಾ ಪ್ಲಸ್- 04
- ಡೆಲ್ಟಾ ಸಬ್ ಲೈನ್ಏಜ್- 256
- ಡೆಲ್ಟಾ ಸಬ್ ಲೈನ್ಏಜ್ AY.12H -15
- ಕಪ್ಪಾ- 160
- ಈಟಾ- 01
ಇದನ್ನೂ ಓದಿ:ರಸ್ತೆ ದುರಸ್ತಿ ಮಾಡುವ ಪುಟಾಣಿಗಳ ಫೋಟೋ ವೈರಲ್.. ಕೂಡಲೇ ಮಾರ್ಗ ಸರಿಪಡಿಸುವಂತೆ ನ್ಯಾಯಾಧೀಶರ ತಾಕೀತು